ಬಿ.ಆರ್.ಪಿ.ಎಂ.ಎಸ್.ನಿಂದ ಬಿಜೆಪಿಗೆ ಬೆಂಬಲ ಘೋಷಣೆ
ಕಾಸರಗೋಡು: ಚಂದ್ರಗಿರಿ ಶ್ರೀ ಶಾಂತೇರಿ ಮಹಾಮಾಯಿ ಕ್ಷೇತ್ರ ಪರಿಸರದಲ್ಲಿ ನಡೆದ ಭಾರತೀಯ ರಾಜ್ಯ ಪೆನ್ಶನರ್ಸ್ ಮಹಾಸಂಘದ ಜಿಲ್ಲಾ ಘಟಕ ಸಭೆಯಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರಿಗೆ ಬೆಂಬಲ ಸೂಚಿಸಲಾಯಿತು. ಸಭೆಗೆ ತಲುಪಿದ ಅಭ್ಯರ್ಥಿ ಅಶ್ವಿನಿಯವರಿಗೆ ಸ್ವಾಗತ ನೀಡಲಾಯಿತು. ದೇಶೀಯ ಅಧ್ಯಕ್ಷ ಸಿ.ಎಚ್. ಸುರೇಶ್ ಉದ್ಘಾ ಟಿಸಿದರು. ಬಿ.ಆರ್.ಪಿ.ಎಂ.ಎಸ್. ಜಿಲ್ಲಾ ಘಟಕ ಅಧ್ಯಕ್ಷ ಎಂ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದರು.
ಬಿಜೆಪಿ ಸ್ಟೇಟ್ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಜಿಲ್ಲಾ ಸೆಕ್ರೆಟರಿ ವಿಜಯ ಕುಮಾರ್ ರೈ, ನಗರಸಭೆ ಕೌನ್ಸಿಲರ್ ಗಳಾದ ಪಿ. ರಮೇಶ್, ಶ್ರೀಲತಾ ಟೀಚರ್, ಬಿಜೆಪಿ ಉದುಮ ಮಂಡಲ ಅಧ್ಯಕ್ಷ ಪುರುಷೋತ್ತಮ್, ಕಳನಾಡು ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್, ಹಿಂದೂ ಐಕ್ಯವೇದಿಯ ಸುರೇಶನ್, ಬಿ.ಆರ್.ಪಿ.ಎಂ.ಎಸ್.ನ ಉಮಾದೇವಿ, ಶ್ರೀಕಂಠನ್, ಇ.ಕೆ. ರವೀಂದ್ರನ್, ಕೆ. ಕುಂಞಿಕಣ್ಣನ್, ಶಾಂತೇರಿ ಮಹಾಮಾಯಿ ತರವಾಡು ಟ್ರಸ್ಟಿನ ಅಧ್ಯಕ್ಷ ಅಮರ್ನಾಥ್ ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯೇಂದ್ರ ಸಿ.ಎಚ್. ಉದ್ಘಾಟಿಸಿ, ದೇಶೀಯ ಕೋಶಾಧಿಕಾರಿ ಕೆ. ದಯಾನಂದ ಮುಜುಂಗಾವು ವಂದಿಸಿದರು.