ಬಿ.ಎಂ.ಎಸ್. ನೇತಾರ ನ್ಯಾಯವಾದಿ ಪಿ. ಸುಹಾಸ್ ಕೊಲೆ ಪ್ರಕರಣ: ಮರು ತನಿಖೆಗೆ ವಿಚಾರಣಾ ನ್ಯಾಯಾಲಯ ಆದೇಶ

ಕಾಸರಗೋಡು:  2008 ಎಪ್ರಿಲ್ ತಿಂಗಳಲ್ಲಿ ಇಡೀ ಕಾಸರಗೋಡು ಜಿಲ್ಲೆ ಯನ್ನೇ ನಡುಗಿಸಿದ ಸರಣಿ ಕೊಲೆ ಪ್ರಕರ ಣಗಳ ಪೈಕಿ ಕಾಸರಗೋಡು ನಗರದ ತಾಲೂಕು ಕಚೇರಿ   ಸಮೀಪ ವಾಸಿಸು ತ್ತಿದ್ದ ಖ್ಯಾತ ನ್ಯಾಯವಾದಿ ಹಾಗೂ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಪಿ. ಸುಹಾಸ್ (38)ರ ಕೊಲೆ ಪ್ರಕರಣದ ಬಗ್ಗೆ  ಮರು ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯವಾದ ತಲಶ್ಶೇರಿ ಸೆಶನ್ಸ್ ನ್ಯಾಯಾಲಯ ನಿರ್ದೇಶ ನೀಡಿದೆ.  ಸ್ಟೇಟ್ ಕ್ರೈಮ್ ಬ್ರಾಂಚ್‌ನ ಕಾಸರಗೋಡು ಘಟಕದ ಡಿವೈಎಸ್‌ಪಿ ಪಿ. ಮಧುಸೂದನನ್ ನಾಯರ್ ನೀಡಿದ ಅರ್ಜಿಯನ್ನು ಪರಿ ಗಣಿಸಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಈ ಕೊಲೆ ಪ್ರಕರ ಣದ ಆರೋಪಿಗಳ ಪರ ವಾದಿಸಲು ಕಾಸರ ಗೋಡು ಜಿಲ್ಲೆಯ ನ್ಯಾಯವಾ ದಿಗಳು ತಯಾರಾಗದ ಹಿನ್ನೆಲೆಯಲ್ಲಿ  ಪ್ರಕರಣದ ವಿಚಾರಣೆಯನ್ನು   ತಲಶ್ಶೇರಿ ಸೆಶನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿ ಸಲಾಗಿತ್ತು.  ಅಲ್ಲಿ ಅದರ ವಿಚಾರಣೆ ಅರಂಭಗೊಂ ಡಿತ್ತಾದರೂ ಬಳಿಕ ಅದನ್ನು   ರದ್ದುಗೊಳಿಸಲಾಗಿತ್ತು.

ಈ ಕೊಲೆ ಪ್ರಕರಣದ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆದಿಲ್ಲವೆಂ ದೂ, ಆದ್ದರಿಂದ  ಮರುತನಿಖೆ ನಡೆಸಬೇಕೆಂದು ನ್ಯಾಯಾಲಯ  ನಿರ್ದೇಶ ನೀಡಿದೆ. ಅದರಿಂದಾಗಿ ಕೊಲೆ ಪ್ರಕರಣದ ಮರು ತನಿಖೆ ಶೀಘ್ರ ಆರಂಭಗೊಳ್ಳುವ ಸಾಧ್ಯತೆ ಇದೆ.  ಈ ಕೊಲೆ ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದಾರೆ. ಬಿ.ಎಂ. ರಫೀಕ್, ಎ.ಎ. ಅಬ್ದುಲ್ ರಹೀಂ ಅಲಿಯಾಸ್ ಅಮ್ಮಿ, ಅಬ್ದುಲ್ ರಹಿಮಾನ್ ಅಲಿಯಾಸ್ ರಹೀಂ, ಶಾಫೀರ್, ಅಹಮ್ಮದ್ ಶಿಹಾಬ್ ಮತ್ತು ಅಹಮ್ಮದ್ ಸಫ್ವಾನ್ ಈ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.

೨೦೦೮ ಎಪ್ರಿಲ್ ೧೭ರಂದು ಸಂಜೆ ನಗರದ ಕೋಟೆ ರಸ್ತೆ ಬಳಿಯಿರುವ  ವಕೀಲ ಕಚೇರಿ ಯ ಪರಿಸರದಲ್ಲಿ ಹೊಂಚುಹಾಕಿದ್ದ ದುಷ್ಕರ್ಮಿಗಳ ತಂಡ ಸುಹಾಸ್‌ರ ಮೇಲೆ ಮಾರಕಾಯುಧ ಗಳೊಂದಿಗೆ ಎರಗಿ ಎದೆ, ಕುತ್ತಿಗೆ, ಹೊಟ್ಟೆಗೆ ಯದ್ವಾತದ್ವವಾಗಿ ಇರಿದು ಗಂಭೀರ ಗಾಯಗೊಳಿಸಿತ್ತು.  ಇದರಿಂದ ಅವರನ್ನು  ಮೊದಲು ನಗರದ ಖಾಸಗಿ ಆಸ್ಪತ್ರೆಗೂ  ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದರು. 

ಕಾಸರಗೋಡಿನ ಯುವ ನ್ಯಾಯವಾದಿಯಾಗಿದ್ದ ಸುಹಾಸ್ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರು   ಮಾತ್ರವಲ್ಲದೆ ಮೋಟಾರು ಕಾರ್ಮಿಕ ಯೂನಿಯನ್ (ಬಿಎಂಎಸ್)ನ ಜಿಲ್ಲಾ ಉಪಾಧ್ಯಕ್ಷ, ಟೌನ್ ಕೋ-ಆಪರೇಟಿವ್ ಬ್ಯಾಂಕ್ ಎಂಪ್ಲೋ ಯೀಸ್ ಯೂನಿಯನ್‌ನ ಅಧ್ಯಕ್ಷ ಹಾಗೂ ಕಾಸರಗೋಡು ಬಾರ್ ಅಸೋಸಿಯೇಶನ್‌ನ ಸದಸ್ಯರೂ ಆಗಿದ್ದರು.

2008 ಎಪ್ರಿಲ್ 16ರಂದು ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕಾಸರಗೋಡು ಬೀಚ್ ರಸ್ತೆ ಅಚ್ಚಪ್ಪ ಲೇನ್ ಕಾಂಪೌಂಡ್‌ನ ಕೆ. ಸಂದೀಪ್ (23)ರನ್ನು ಅಕ್ರಮಿಗಳ ತಂಡ ಮೊದಲು ಇರಿದು ಬರ್ಭರವಾಗಿ ಕೊಲೆಗೈದಿತ್ತು. ಅದಾದ ಬೆನ್ನಲ್ಲೇ  ಅದೇ ದಿನ ನಗರದ ಆನೆ ಬಾಗಿಲು ರಸ್ತೆ ಬಳಿಯ ಮೊಹಮ್ಮದ್ ಸಿನಾನ್ (             18)ರನ್ನು ಆನೆಬಾಗಿಲು ರಸ್ತೆ ಬಳಿ ಅಕ್ರಮಿಗಳ ತಂಡ ಇರಿದು ಕೊಲೆಗೈದಿತ್ತು. ಅದಾದ ನಂತರ ಎಪ್ರಿಲ್ ೧೭ರಂದು ಪಿ. ಸುಹಾಸ್ ಕೊಲೆಗೈ ಯ್ಯಲ್ಪಟ್ಟಿದ್ದರು. ಈ ಮೂರು ಕೊಲೆಗಳು ನಡೆದ ಬೆನ್ನಲ್ಲೇ 2008 ಎಪ್ರಿಲ್ 18ರಂದು ಕಾಸರಗೋಡು ಅಡ್ಕತ್ತಬೈಲು ಗುಡ್ಡೆ ರಸ್ತೆ ಬಳಿ ಸ್ಥಳೀಯರಾಗಿದ್ದ ಸಿ.ಎ. ಮೊಹಮ್ಮದ್ (50)ರನ್ನೂ ಇರಿದು ಬರ್ಭರವಾಗಿ ಕೊಲೆಗೈಯ್ಯಲಾ ಗಿತ್ತು. ಒಂದು ವಾರದೊಳಗೆ ನಗರದಲ್ಲಿ ನಾಲ್ವರು ಕೊಲೆಗೈಯ್ಯಲ್ಪಟ್ಟಿದ್ದು ಅದು ಇಡೀ ಜಿಲ್ಲೆಯನ್ನೇ ನಡುಗಿಸಿತ್ತು.

Leave a Reply

Your email address will not be published. Required fields are marked *

You cannot copy content of this page