ಬಿ.ವಿ. ಕಕ್ಕಿಲ್ಲಾಯರಿಗೆ ಕರ್ನಾಟಕ ಸಮಿತಿ ಗೌರವಾರ್ಪಣೆ

ಕಾಸರಗೋಡು : ಕರ್ನಾಟಕ ಸಮಿತಿಯ ಗೌರವಾಧ್ಯಕ್ಷ ಬಿ.ವಿ.ಕಕ್ಕಿಲ್ಲಾಯ ಅವರು 80ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ಗೌರವಾರ್ಪಣೆ ಸಮಿತಿಯ ನಗರದ ಕಚೇರಿಯಲ್ಲಿ ನಡೆಯಿತು. ಹಿರಿಯ ಮುಂದಾಳು ಐ.ವಿ.ಭಟ್ ಅಭಿನಂದನೆ ನಡೆಸಿದರು. ವಕೀಲ ಕೆ.ಮುರಳೀಧರ ಬಳ್ಳುಕ್ಕರಾಯ ಅಧ್ಯಕ್ಷತೆ ವಹಿಸಿದ್ದರು. ಗಡಿನಾಡ ಕನ್ನಡ ಹೋರಾಟದಲ್ಲಿ ಬಿ.ವಿ.ಕಕ್ಕಿಲ್ಲಾಯರ ಕೊಡುಗೆ, ಬೇವಿಂಜೆ ಕಕ್ಕಿಲ್ಲಾಯ ಮನೆತನದ ದೇಣಿಗೆ ಇತ್ಯಾದಿಗಳನ್ನು ಸಮಾರಂಭದಲ್ಲಿ ನೆನಪಿಸ ಲÁಯಿತು. ಸಾಮಾಜಿಕ ಕಾರ್ಯಕರ್ತೆ ಆಯಿಷಾ ಎ.ಎ.ಪೆರ್ಲ ಅಭಿನಂದನೆ ಭಾಷಣ ಮಾಡಿದರು. ವಿವಿಧ ವಲಯಗಳ ಸಾಧಕರಾದ ಕೆ.ನಾರಾಯಣ ಗಟ್ಟಿ, ಟಿ.ಶಂಕರನಾರಾಯಣ ಭಟ್, ಕಾಸರಗೋಡು ಚಿನ್ನಾ, ರಾಜೇಂದ್ರ ಕಲ್ಲೂರಾಯ ಎಡನೀರು, ವೇಣುಗೋಪಾಲ ಮಾಸ್ಟರ್, ಬಿ.ರಾಮಮೂರ್ತಿ, ಕೃಷ್ಣಪ್ರಸಾದ್ ಕೋಟೆಕಣಿ, ಡಾ.ಬೇ.ಸಿ. ಗೋಪಾಲಕೃಷ್ಣ, ಗಣೇಶ್ ಪ್ರಸಾದ್, ಬಿ.ನರಸಿಂಗ ರಾವ್, ಸತ್ಯಾ ಕಕ್ಕಿಲ್ಲಾಯ, ಆಶಾ, ರಾಜಗೋಪಾಲ, ಅಶೋಕ ರೈ, ಡಾ.ರಾಧಾಕೃಷ್ಣ ಬೆಳ್ಳೂರು, ಯತೀಶ್ ಕುಮಾರ್ ರೈ ಮೊದಲಾದವರು ಭಾಗವಹಿಸಿದರು. ಕೆ.ಸತ್ಯನಾರಾಯಣ ತಂತ್ರಿ ಸ್ವಾಗತಿಸಿ, ಡಾ.ಕೆ.ಕಮಲಾಕ್ಷ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಶಾಲಾಕ್ಷ ಪುತ್ರಕಳ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page