ಬಿ.ವಿ. ರಾಜನ್‌ರಿಗೆ ಮೀಂಜದಲ್ಲಿ ಸರ್ವಪಕ್ಷದಿಂದ ಶ್ರದ್ಧಾಂಜಲಿ

ಮೀಯಪದವು: ಮಂಜೇಶ್ವರ ತಾಲೂಕು ಮಾತ್ರವಲ್ಲದೆ ಜಿಲ್ಲೆ, ರಾಜ್ಯದ ಕಮ್ಯುನಿಸ್ಟ್ ನಾಯಕರಾಗಿ ಬಡಜನರ ಕಣ್ಮಣಿಯಾದ, ಹಲವಾರು ಬಡ ಕುಟುಂಬಗಳಿಗೆ ಆಸರೆಯಾದ, ಕೃಷಿಕರ, ಬೀಡಿ ಕಾರ್ಮಿಕರ, ಕೃಷಿ ಕೂಲಿ ಕಾರ್ಮಿಕರ ವಿವಿಧ ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ, ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ, ಸಹಕಾರಿ ರಂಗದ ಧುರೀಣರಾಗಿ, ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಜಿಲ್ಲಾ ಸಹಕಾರ್ಯದರ್ಶಿಯಾಗಿ ಕಳೆದ ೨೫ ವರ್ಷ ಮಂಜೇಶ್ವರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ೫ ವರ್ಷ ಅಧ್ಯಕ್ಷರಾಗಿ ಸೆÃವೆ ಸಲ್ಲಿಸಿದ್ದ ಬಿ.ವಿ. ರಾಜನ್‌ರ ಅಕಾಲಿಕ ನಿಧನ ತುಂಬ ಲಾರದ ನಷ್ಟವೆಂದು ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್ ನುಡಿದರು.
ಸಿಪಿಐ ಮೀಂಜ ಹಾಗು ಕಡಂಬಾರ್ ಲೋಕಲ್ ಕಮಿಟಿ ನೇತೃತ್ವದಲ್ಲಿ ಮೀಯಪದವಿನಲ್ಲಿ ನಡೆದ ಸರ್ವಪಕ್ಷ ಸಂತಾಪ ಸೂಚಕ ಸಭೆಯಲ್ಲಿ ಅವರು ಮÁತನಾಡಿದರು. ಸಿಪಿಐ ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ದೆ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ಏರಿಯಾ ಸಮಿತಿ ಸದಸ್ಯ ಡಿ.ಕಮಲಾಕ್ಷ, ಕಾಂಗ್ರೆಸ್ ಮೀಂಜ ಮಂಡಲ ಅಧ್ಯಕ್ಷ ದಾಮೋದರ ಮಾಸ್ತರ್ ಕಬ್ಬಿನಹಿತ್ತಿಲು, ಬಿಜೆಪಿ ನೇತಾರ ಕೆ.ವಿ.ಭಟ್, ಮುಸ್ಲಿಂ ಲೀಗ್ ನೇತಾರ ತಾಜುದ್ದೀನ್, ಕೇರಳ ಕಾಂಗ್ರೆಸ್ ನೇತಾರ ರಾಘವ ಚೇರಾಲ್, ಎನ್‌ಸಿಪಿ ನೇತಾರ ಅಬ್ದುಲ್ಲ ಮೀಯಪದವು, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗು ಡೇಲು, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಂದರಿ ಶೆಟ್ಟಿ, ಪಂಚಾಯತ್ ಸದಸ್ಯರಾದ ಜನಾರ್ದನ ಕುಳೂರು, ರೇಖಾ ಶರತ್ ಬೆಜ್ಜ, ಮಾಜಿ ಪಂ.ಅಧ್ಯಕ್ಷ ಸದಾಶಿವ ರೈ, ಮಜಿಬೈಲು ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಾಂತಾ ರಾಮ ಶೆಟ್ಟಿ, ಎಐವÉÊಎಫ್ ಮಂಡಲ ಸಮಿತಿ ಅಧ್ಯಕ್ಷ ಶರತ್ ಬೆಜ್ಜ ಹಾಗು ವಿವಿಧ ಪಕ್ಷಗಳ ಕಾರ್ಯ ಕರ್ತರು, ಹಿತೈಷಿಗಳು ಭಾಗವಹಿಸಿದ್ದರು. ಸಿಪಿಐ ಕಡಂಬಾರ್ ಲೋಕಲ್ ಕಾರ್ಯದರ್ಶಿ ಹರೀಶ್ ಕೆ.ಆರ್ ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page