ಬಿ.ವಿ. ರಾಜನ್ ಪ್ರಥಮ ಸಂಸ್ಮರಣೆ
ಮಂಜೇಶ್ವರ: ಬಿ.ವಿ ರಾಜನ್‌ರ ಪ್ರಥಮ ಸಂಸ್ಮರಣೆ ವಾರ್ಷಿಕ ಮತ್ತು ಸಮ್ಮೇಳನ ಇಂದು ಬೆಳಗ್ಗೆ ಅವರ ನಿವಾಸ ಬಳಿಯ ಸ್ಮೃತಿ ಮಂಟಪದಲ್ಲಿ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಪುಷ್ಪಾರ್ಚನೆಗೈಯುವ ಮೂಲಕ ಉದ್ಘಾಟಿಸಿದರು. ಹಿರಿಯ ಸದಸ್ಯ ಮೋನು ಕುಚ್ಚಿಕ್ಕಾಡ್ ಧ್ವಜಾರೋಹಣಗೈದರು. ಲೋಕಲ್ ಕಾರ್ಯದರ್ಶಿ ಶ್ರೀಧರ ಮಾಡ ಅಧ್ಯಕ್ಷತೆ ವಹಿಸಿದರು. ರಾಜ್ಯ ಕೌನ್ಸಿಲ್ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್, ಜಿಲ್ಲಾ ಕೌನ್ಸಿಲ್ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ಎಸ್ ರಾಮಚಂದ್ರ ಬಡಾಜೆ, ಕಿಶನ್ ಕುಮಾರ್ ಹೆಗ್ಡೆ, ಹರೀಶ್ ಕೆ.ಆರ್, ಮುಸ್ತಫಾ ಕಡಂಬಾರ್, ಶಾಂತರಾಮ್ ಶೆಟ್ಟಿ, ದಯಾಕರ ಮಾಡ, ದೀಪಕ್ ಬಡಾಜೆ, ಪ್ರದೀಶ್ ಬಡಾಜೆ, ಚಿತ್ರಾವತಿ ಅಂಜರೆ, ಜಯಶ್ರೀ, ಅದ್ರಾಮ, ನಾರಾಯಣ ಬಡಾಜೆ, ನಾರಾಯಣ ಕಾಜೂರ್, ಡಿ. ರಾಜ, ಕಿರಣ್ ಮಾಡ, ನವೀನ್ ಬಡಾಜೆ, ನಿರಂಜನ್ ಕಣ್ವತೀರ್ಥ, ಮೂಸ ಇಚ್ಲಂಗೋಡ್, ರಮೇಶ್ ಉದ್ಯಾವರ, ಮುಸ್ತಫಾ ಬಂಗ್ರ ಮಂಜೇಶ್ವರ, ಉದಯಕುಮಾರ್ ಶೆಟ್ಟಿ ಕರಿಬೈಲ್, ಶನೀಶ್ ಮಂಜೇಶ್ವರ, ಮಾಮೂದ್, ಸೂರಜ್ ಕಣ್ವತೀರ್ಥ, ರಾಮಚಂದ್ರ ಕಣ್ವತೀರ್ಥ, ಶರತ್ ಬೆಜ್ಜ, ತನಿಯಪ್ಪ ಬೆಜ, ನಾರಾಯಣಿ ರಾಜನ್, ರಮ್ಯಾ ರಾಜನ್, ಯಧು ಕೃಷ್ಣ ಉಪಸ್ಥಿತರಿದ್ದರು. ಬಳಿಕ ನಡೆದ ಸಮ್ಮೇಳನವನ್ನು ಸಿಪಿಐ ಮಾಜಿ ದೇಶೀಯ ಸಮಿತಿ ಸದಸ್ಯ ಪನ್ಯನ್ ರವೀಂದ್ರನ್ ಉದ್ಘಾಟಿಸಿದರು. ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಹಲವರು ಮಾತನಾಡಿದರು. ಪಕ್ಷದ ನೇತಾರರು, ಕಾರ್ಯಕರ್ತರು, ಬಿ.ವಿ ರಾಜನ್ ಕುಟುಂಬಿಕರು, ಅಭಿಮಾನಿಗಳು ಉಪಸ್ಥಿತರಿದ್ದರು. ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ವಂದಿಸಿದರು.