ಬೀಗ ಜಡಿದ ಮನೆಯಿಂದ ನಗ-ನಗದು ಕಳವು

ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ನಗ-ನಗದು ಕಳವುಗೈದ ಬಗ್ಗೆ ವಿದ್ಯಾನಗರ ಪೊಲೀಸರಿಗೆ ದೂರು ನೀಡಲಾಗಿದೆ.

ನಾಯಮ್ಮಾರಮೂಲೆ ಪೆರುಂಬಳ ಕಡವಿನಲ್ಲಿ ಈಗ ವಾಸಿಸುತ್ತಿರುವ ಸಮೀರ್ ಎಂಬವರ ಆಲಂಪಾಡಿ ಎರಿಯಪ್ಪಾಡಿ ಪಾರೆಕೆಟ್ಟು ನಲ್ಲಿರುವ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯ ಬೆಡ್ ರೂಂನ ಫ್ರಿಜ್‌ನ ಮೇಲೆ ಇರಿಸಲಾಗಿದ್ದ ನಾಲ್ಕು ಪವನ್‌ನ ಚಿನ್ನದೊಡವೆ  ಹಾಗೂ 200 ರೂ.ಗಳ ನಾಣ್ಯವನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಮೀರ್ ತಿಳಿಸಿದ್ದಾರೆ.   ಈ ಮನೆಗೆ ಕಳೆದ ಡಿಸೆಂಬರ್ ೫ರಂದು ಬೀಗ ಹಾಕಿದ್ದು,  ನಿನ್ನೆ   ಮನೆಗೆ ಬಂದಾಗ ಕಳವು ನಡೆದ ವಿಷಯ ಮನೆಯವರ ಗಮನಕ್ಕೆ ಬಂದಿದೆ. ಮನೆಯ ಕಿಟಿಕಿಯ ಗಾಜು ಒಡೆದು ಗ್ರಿಲ್ಸ್ ಮುರಿದು ಕಳ್ಳವು ಒಳನುಗ್ಗಿ ಕಳವು ನಡೆಸಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page