ಬೃಹತ್ ಜೂಜಾಟ ತಂಡ ಸೆರೆ: ೧೦೭೯೮೦ ರೂ. ವಶ
ಕಾಸರಗೋಡು: ವೆಳ್ಳರಿಕುಂಡ್ ಪೇಟೆಯ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಬೃಹತ್ ಜೂಜಾಟ ಕೇಂದ್ರಕ್ಕೆ ವೆಳ್ಳರಿಕುಂಡ್ ಪೊಲೀಸರು ಠಾಣೆಯ ಇನ್ಸ್‌ಪೆಕ್ಟರ್ ಟಿ.ಕೆ. ಶಿಜುರ ನೇತೃತ್ವದ ಪೊಲೀಸರು ದಾಳಿ ನಡೆಸಿ ಜೂಜಾಟದಲ್ಲಿ ನಿರತರಾಗಿದ್ದ ೧೧ ಮಂದಿಯನ್ನು ಬಂಧಿಸಿದ್ದಾರೆ.
ಈ ಜುಗಾರಿ ಅಡ್ಡೆಯಿಂದ ೧೦೭೯೮೦ ಕೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಹೊಸುದರ್ಗ ಕುಶಾಲ್ ನಗರದ ಕೆ. ಜಾಸೀರ್ (೨೫) ವೆಳ್ಳರಿಕುಂಡ್ ಅಟ್ಟಪರಂಬದ ಸಜಿ ಜೋಸೆಫ್ (೪೬) ಹೊಸದುರ್ಗದ ಸೌತ್‌ನ ಪಿ. ಸಬೀರ್ (೩೨), ಕಳ್ಳಾರಿನ ಎಂ.ಸಿ. ಜೋಸ್ (೫೭), ಮಲೋಂ ಪರಂಬಿನ ಇ. ರಾಗೇಶ್ (೩೨), ಕುನ್ನುಂಕಯ ಸಿ.ಎಚ್. ಫಿರೋಸ್ (೪೨), ಕಳ್ಳಾರು ಮಾಲಕ್ಕಲ್‌ನ ಎಂ.ಜೆ. ಥೋಮಸ್ (೬೧), ಕಾಟ್ಟುಂಕವಲದ ಟಿ. ಪ್ರದೀಪ್ (೩೪), ಅಜಾನೂರಿನ ಪಿ.ಎಂ. ಸಲಾಂ (೪೨), ಪರಂಬದ ರಮೇಶನ್ (೪೦), ಮಾಣಿಕ್ಕೋತ್‌ನ ಟಿ.ಟಿ. ಅಶ್ರಫ್ (೪೮) ಬಂಧಿತ ಆರೋಪಿಗಳು. ಹೊಸದುರ್ಗ ಡಿವೈಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್ ನೀಡಿದ ನಿರ್ದೇಶ ಪ್ರಕಾರ ಈ ಪೊಲೀಸ್ ದಾಳಿ ನಡೆದಿದೆ.