ಬೆಂಕಿ ತಗಲಿ ಗಂಭೀರ ಗಾಯಗೊಂಡಿದ್ದ ವೃದ್ದೆ ಮೃತ್ಯು

ಮಂಜೇಶ್ವರ: ದೀಪದಿಂದ ಸೀರೆಗೆ ಬೆಂಕಿ ತಗಲಿ ಸುಟ್ಟು ಗಾಯಗೊಂಡಿದ್ದ ವೃದ್ದೆ ಮೃತಪಟ್ಟರು. ಈ ತಿಂಗಳ ೧೪ರಂದು ದೇವರಕೋಣೆಯಲ್ಲಿ ಪ್ರಾರ್ಥನೆ ವೇಳೆ ಸೀರೆಗೆ ದೀಪದಿಂದ ಬೆಂಕಿ ತಗಲಿದೆ. ಕೂಡಲೇ ಮನೆಯವರು ಬೆಂಕಿ ನಂದಿಸಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ರಾತ್ರಿ ಮೃತಪಟ್ಟರು. ಕುಳೂರು ಪೊಯ್ಯೇಲು ನಿವಾಸಿ ದಿ| ಮದನಪ್ಪ ಶೆಟ್ಟಿಯವರ ಪತ್ನಿ ಸುನೀತಾ ಎಂ. (೮೪) ಮೃತಪಟ್ಟವರು.

ಮೃತರು ಮಕ್ಕಳಾದ ಮೋಹನ ಶೆಟ್ಟಿ, ಯೋಗೀಶ ಶೆಟ್ಟಿ, ಸೊಸೆಯಂದಿರಾದ ಮಮತಾ, ಭಾರತಿ, ಪ್ರಫುಲ್ಲಾ, ಸಹೋದರಿ ರಾಜೀವಿ ಶೆಟ್ಟಿ ಕಂಬಳಬೆಟ್ಟು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಚಂದ್ರಹಾಸ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page