ಬೆದ್ರಂಪಳ್ಳ ಮನೆಗೆ ಎರಡನೇ ಬಾರಿಯೂ ಕಳವಿಗೆ ತಲುಪಿರುವುದು ಮೊದಲ ತಂಡ; ಗುರಿ ೪೦ ಗೋಣಿ ಅಡಿಕೆ

ಬದಿಯಡ್ಕ: ಪೆರ್ಲ ಬಳಿಯ ಬೆದ್ರಂಪಳ್ಳದಲ್ಲಿ ಅಧ್ಯಾಪಕನ ಮನೆಗೆ ಎರಡನೇ ಬಾರಿಯೂ ಕಳವಿಗೆ ತಲುಪಿರುವುದು ಮೊದಲು ಕಳವು ನಡೆಸಿದ ತಂಡವೇ ಆಗಿದೆಯೆಂಬ ಸೂಚನೆಯಿದೆ. ಕಳ್ಳರು ತಮ್ಮ ಗುರುತು ಲಭಿಸದಿರಲು ದೇಹಪೂರ್ತಿ ಮುಚ್ಚಿಕೊಂಡು  ಮನೆಯೊಳಗೆ ಜಾಲಾಡಿದ್ದಾರೆ. ಕಳ್ಳರ ತಂಡದಲ್ಲಿ ಮೂರು ಮಂದಿಯಿದ್ದು, ಅವರ  ಗುರಿ ಮನೆಯೊಳಗೆ ಭದ್ರವಾಗಿರಿಸಿದ ೪೦ ಗೋಣಿ ಚೀಲ ಒಣಗಿದ ಅಡಿಕೆ ಕಳವು ನಡೆಸುವುದೇ ಆಗಿದೆಯೆಂಬ ಸೂಚನೆಯಿದೆ. ತಂಡ ತಲುಪಿರುವುದು ಇನ್ನೋವಾ  ಕಾರಿನಲ್ಲಾಗಿದೆಯೆಂಬ ಸೂಚನೆಯೂ ಲಭಿಸಿದೆ.

ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಕನಾಗಿರುವ ಅಬ್ದುಲ್ ರಹಮ್ಮಾನ್‌ರ ಮನೆಯಿಂದ ಕಳವು ನಡೆದಿದೆ. ಅಧ್ಯಾಪಕ ಕುಟುಂಬ ಸಮೇತ ಕಾಸರಗೋಡಿನಲ್ಲಿ ವಾಸಿಸುತ್ತಿದ್ದಾರೆ.  ವಾರದಲ್ಲಿ ಒಂದು ಬಾರಿ ಮಾತ್ರವೇ ಅವರು ಬೆದ್ರಂಪಳ್ಳದ ಮನೆಗೆ ತಲುಪುತ್ತಿದ್ದಾರೆ.

ಎರಡು ವಾರಗಳ ಹಿಂದೆ ಅವರು ಮನೆಗೆ ತಲುಪಿದಾಗ ಮನೆಯಲ್ಲಿ ಕಳವು ನಡೆದ ವಿಷಯ ತಿಳಿದುಬಂದಿದೆ.  ಅಂದು ವಾಚ್ ಸಹಿತ ಸಾಮಗ್ರಿಗಳು ಕಳವಿಗೀಡಾಗಿತ್ತು. ಈ ಘಟನೆಯಲ್ಲಿ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಕಳವು ನಡೆದ ಬಳಿಕ ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾ ಸ್ಥಾಪಿಸಿ ಅದರಲ್ಲಿ ಸೆರೆಯಾಗುವ ದೃಶ್ಯಗಳು ತಮ್ಮ ಮೊಬೈಲ್ ಫೋನ್‌ನಲ್ಲಿ ಲಭಿಸುವ ವ್ಯವಸ್ಥೆ ಏರ್ಪಡಿಸಲಾಗಿತ್ತು. ಆದರೆ ಎರಡು ವಾರಗಳ ಬಳಿಕ ಮನೆಯಲ್ಲಿ ಮತ್ತೆ ಕಳವಿಗೆ ಯತ್ನ ನಡೆದಿದೆ. ಸಿಸಿ ಟಿವಿ ಕ್ಯಾಮರಾದ  ಡಿ.ವಿ.ಆರ್ ಸಹಿತ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆ ಬಗ್ಗೆಯೂ ಕೇಸು ದಾಖಲಿಸಲಾಗಿದೆ.

ಮೊದಲ ಬಾರಿ ಕಳವು ನಡೆಯು ವಾಗ ಮನೆಯಲ್ಲಿ ೪೦ ಗೋಣಿ ಚೀಲ ಅಡಿಕೆ ಇತ್ತು. ಅದನ್ನು ದೋಚಲು ಮೊದಲು ಕಳವು ನಡೆಸಿದ ತಂಡ ಮತ್ತೆ ತಲುಪಿದೆಯೆಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page