ಬೆಲೆಯೇರಿಕೆ, ಸಾಮಗ್ರಿ ಅಲಭ್ಯ ಪ್ರತಿಭಟಿಸಿ ಕಾಂಗ್ರೆಸ್ನಿಂದ ಸಪ್ಲೈ ಆಫೀಸ್ಗೆ ಮಾರ್ಚ್
ಕಾಸರಗೋಡು: ತೀವ್ರಗೊಂಡ ಬೆಲೆ ಯೇರಿಕೆ ಹಾಗೂ ಸಾರ್ವಜನಿಕ ವಿತ ರಣೆ ಕೇಂದ್ರಗಳಲ್ಲಿ ನಿತ್ಯೋಪ ಯೋಗಿ ಸಾಮಗ್ರಿಗಳ ಅಲಭ್ಯವನ್ನು ಪ್ರತಿಭಟಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಸಪ್ಲೈ ಆಫೀಸ್ಗೆ ಇಂದು ಬೆಳಿಗ್ಗೆ ಬಹುಜನ ಮಾರ್ಚ್ ನಡೆಸಲಾಯಿತು. ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ನೇತಾರರಾದ ಪಿ.ಎ. ಅಶ್ರಫ್ ಅಲಿ, ಎ. ಗೋವಿಂದನ್ ನಾಯರ್, ವಿನೋದ್ ಕುಮಾರ್, ಎಂ. ಕುಂ ಞಂಬು ನಂಬ್ಯಾರ್, ಪಿ.ವಿ. ಸುರೇಶ್, ಎಂ.ಸಿ. ಪ್ರಭಾಕರನ್, ಎಂ. ರಾಜೀವನ್ ನಂಬ್ಯಾರ್, ವಿ. ಗೋಪಕುಮಾರ್, ಲೋಕನಾಥ ಶೆಟ್ಟಿ, ಕೆ.ವಿ. ಭಕ್ತವತ್ಸಲನ್, ಜಮೀಲ ಅಹಮ್ಮದ್ ಮೊದಲಾದವರು ನೇತೃತ್ವ ನೀಡಿದರು.