ಬೆಳ್ಳೂರು ಪಂ. ಮಾಜಿ ಸದಸ್ಯ ಶತಾಯುಷಿ ನಿಧನ

ಮುಳ್ಳೇರಿಯ: ಬೆಳ್ಳೂರು ಸಬ್ರಕಜೆ ನಿವಾಸಿ ಶತಾಯುಷಿ ದೇವರಗುತ್ತು ರಾಮಕೃಷ್ಣ ರೈ (೧೦೧) ನಿಧನಹೊಂದಿದರು. ಬೆಳ್ಳೂರು ಪಂ. ಮಾಜಿ ಸದಸ್ಯರಾಗಿದ್ದ ಇವರು ಸಾಮಾಜಿಕ, ಧಾರ್ಮಿಕ, ರಾಜ ಕೀಯ  ರಂಗದಲ್ಲಿ ಸಕ್ರಿಯರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದರು.

 ಪತ್ನಿ ಚಂದ್ರಬಾಗಿ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಶ್ರೀಧರ ರೈ, ದಾಮೋ ದರ ರೈ, ಪುರಂದರ ರೈ, ಹೇಮಾವತಿ, ಸಾವಿತ್ರಿ,ಭವಾನಿ, ಶಾರದ, ಇಂದಿರಾ, ಅಳಿಯಂದಿರಾದ ಗಂಗಾಧರ ರೈ, ರಘುನಾಥ ರೈ, ಶುಭಕರ ಮಾಡ, ಸೊಸೆಯಂದಿರಾದ ಪ್ರೇಮಾವತಿ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಳಿಯಂದಿರಾದ ಆನಂದ ರೈ ಸರ್ವೆ, ಕಿಂಞ್ಞಣ್ಣ ಆಳ್ವ ಕಡಾರು, ಸೊಸೆ ಪ್ರೇಮ ಈ ಹಿಂದೆ ನಿಧನಹೊಂದಿದ್ದಾರೆ. ನಿಧನಕ್ಕೆ ಬೆಳ್ಳೂರು ಪಂ. ಬಿಜೆಪಿ ಸಮಿತಿ  ಸಂತಾಪ ಸೂಚಿಸಿದೆ.

Leave a Reply

Your email address will not be published. Required fields are marked *

You cannot copy content of this page