ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ ಜಾತ್ರಾಮಹೋತ್ಸವ ೨೨, ೨೩ರಂದು

ಮುಳ್ಳೇರಿಯ: ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ  ಜಾತ್ರಾ ಮಹೋತ್ಸವ ಜನವರಿ ೨೨ ಹಾಗೂ ೨೩ರಂದು ನಡೆಯಲಿದೆ. ಇದರ ಅಂಗವಾಗಿ ೨೧ರಂದು ಸಂಜೆ ೪ಕ್ಕೆ ನಾಟೆಕಲ್ಲು ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ಹರಿನಗರ ಶ್ರೀ ಗಣೇಶ ಮಂದಿರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ೫ ಗಂಟೆಗೆ ಉಗ್ರಾಣ ತುಂಬಿಸುವುದು, ೬ಕ್ಕೆ ಭಜನೆ, ೭ಕ್ಕೆ ವೈದಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ.

೨೨ರಂದು ಬೆಳಿಗ್ಗೆ ೭ರಿಂದ ಗಣಪತಿ ಹೋಮ, ನವಕ, ೮ರಿಂದ ಭಜನೆ, ೯ಕ್ಕೆ ಭಗವದ್ಗೀತೆ ಮತ್ತು ಮೂಲ ರಾಮಾಯಣ ಪಾರಾಯಣ, ೧೦ಕ್ಕೆ ಭಜನೆ, ೧೧ರಿಂದ ತುಲಾಭಾರ ಸೇವೆ, ಮಹಾಪೂಜೆ, ಅನ್ನ ಸಂತರ್ಪಣೆ, ಅಪರಾಹ್ನ ೨ ಗಂಟೆಗೆ ಯಕ್ಷಗಾನ ತಾಳಮದ್ದಳೆ, ೪ರಿಂದ ಭಜನೆ, ೬ರಿಂದ ಲಕ್ಷದೀಪೋತ್ಸವ, ರಾತ್ರಿ ೯ರಿಂದ ಭೂತಬಲಿ ಉತ್ಸವ, ಅನ್ನ ಸಂತರ್ಪಣೆ, ೨೩ರಂದು ಬೆಳಿಗ್ಗೆ ೮ಕ್ಕೆ ಭಜನಾರ್ಚನೆ, ೯ರಿಂದ ದೇವರ ದರ್ಶನ ಬಲಿ ಉತ್ಸವ, ಬಟ್ಟಲು ಕಾಣಿಕೆ, ಮಹಾಪ್ರಸಾದ, ಮಂತ್ರಾಕ್ಷತೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ೨ ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಂಜೆ ೪ಕ್ಕೆ ಭಜನೆ, ೫.೩೦ಕ್ಕೆ ಯಕ್ಷಗಾನ- ಶಾಂಭವಿ ವಿಲಾಸ, ರಾತ್ರಿ ೮ಕ್ಕೆ ರಂಗಪೂಜೆ, ಅನ್ನಸಂತರ್ಪಣೆ, ೯.೩೦ರಿಂದ ತುಳು ಯಕ್ಷಗಾನ  ‘ಗುಳಿ-ಶಿವಗುಳಿಗ’ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

You cannot copy content of this page