ಬೇಕೂರು ಸೇವಾ ಭಾರತಿ ಕಲಾವೃಂದ ವಾರ್ಷಿಕ ಮಹಾಸಭೆ, ಧನಸಹಾಯ ವಿತರಣೆ
ಉಪ್ಪಳ: ಸೇವಾ ಭಾರತಿ ಕಲಾವೃಂದ ಹಾಗೂ ಬೇಕೂರು ಭಜನಾ ಮಂದಿರ ಇದರ ವಾರ್ಷಿಕ ಮಹಾಸಭೆ, ಬಡ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಧನಸಹಾಯ ವಿತರಣೆ ಕಾರ್ಯಕ್ರಮ ನಡೆಯಿತು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿರುವ ಸೇವಾ ಭಾರತಿ ಕಲಾವೃಂದದ ಕಾರ್ಯ ಶ್ಲಾಘನೀಯ ಎಂದರು. ಇದೇ ವೇಳೆ ರಾಮಣ್ಣ ಆಚಾರ್ಯ ಬೇಕೂರು, ಹರೀಶ್ ಮೇಸ್ತ್ರಿ ಅಟ್ಟೆಗೋಳಿ, ರಾಜೇಶ್ ಕೋಡಿಬೈಲು, ನಾರಾಯಣ ಕಾನ ಇವರನ್ನು ಸನ್ಮಾನಿಸಾಯಿತು. ಗೌರವಾಧ್ಯಕ್ಷ ಕುಂಞಿರಾಮನ್ ಕಾನ, ನಟೇಶ್ ಬಳ್ಳಕ್ಕುರಾಯ, ಅಪ್ಪು ಬೆಳ್ಚಪ್ಪಾಡ, ಗಂಗಾಧರ ಶೆಟ್ಟಿ ಬೊಳುವಾಯಿ, ಶ್ರೀಜಾ, ಪ್ರತಿಮಾ ಬೇಕೂರು ಉಪಸ್ಥಿತರಿದ್ದರು. ಗಾನಶ್ರೀ ಬೇಕೂರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಸ್ವಾಗತಿಸಿ, ಸಂಘದ ಅಧ್ಯಕ್ಷ ರಾಜೇಶ್ ಅಗರ್ತಿಮೂಲೆ ಪ್ರಸ್ತಾಪಿಸಿದರು. ಕೋಶಾಧಿಕಾರಿ ವಿನೋದ್ ಬೇಕೂರು ವಂದಿಸಿದರು.