ಬೈಕ್‌ಗಳಲ್ಲಿ ಬಂದ ಕಳ್ಳರು ಕ್ಷೇತ್ರ ಸಿಬ್ಬಂದಿಯ ಹಣ, ಫೋನ್ ಒಳಗೊಂಡ ಬ್ಯಾಗ್ ಕಳವು
ಕಾಸರಗೋಡು: ಎರಡು ಬೈಕ್ ಗಳಲ್ಲಾಗಿ ಬಂದ ಮೂವರು ಒಳಗೊಂಡ ಕಳ್ಳರ ತಂಡ ಕ್ಷೇತ್ರ ಸಿಬ್ಬಂದಿಯ ಸ್ಕೂಟರ್‌ನಿಂದ ನಗದು ಮತ್ತು ಎರಡು ಮೊಬೈಲ್ ಫೋನ್ ಒಳಗೊಂಡ ಬ್ಯಾಗ್ ಕದ್ದು ಪರಾರಿಯಾದ ಘಟನೆ ನಡೆದಿದೆ.
ಉದುಮ ಉದಯಮಂಗಲ ದೇವಸ್ಥಾನದ ಸೇವಾ ಕ್ಲರ್ಕ್ ಉದುಮ ಪಡಿಞ್ಞಾರ್ ತೆರುವಿನ ಸಿ. ಬಾಲಕೃಷ್ಣನ್ ಎಂಬವರ ಸ್ಕೂಟರ್‌ನಿಂದ ಕಳವು ನಡೆಸಲಾಗಿದೆ. ಬಾಲಕೃಷ್ಣನ್‌ರ ಸ್ವಂತ 23,000 ರೂ. ಹಾಗೂ ದೇವ ಸ್ಥಾನದ ಖರ್ಚಿಗಾಗಿರುವ 20,000 ರೂ. ಮತ್ತು ಎರಡು ಮೊಬೈಲ್‌ಗಳು ಒಳಗೊಂಡ ಬ್ಯಾಗ್ ಸ್ಕೂಟರ್‌ನಲ್ಲಿರಿಸ ಲಾಗಿತ್ತು. ಸ್ಕೂಟರ್‌ನಲ್ಲಿ ಕೆಲವೊಂದು ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅವರು ಬ್ಯಾಗ್ ಒಳಗೊಂಡ ಸ್ಕೂಟರನ್ನು ಉದುಮ ಗ್ಯಾರೇಜೊಂದಕ್ಕೆ ಸಾಗಿಸಿ ಅಲ್ಲಿ ಅದನ್ನು ಮೆಕ್ಯಾನಿಕ್ ಪರೀಕ್ಷಿಸಿದ್ದರ. ಆ ಬಳಿಕ ಆ ಗ್ಯಾರೇಜ್‌ನ ಮುಂಭಾಗದಿಂದಲೇ ನಿನ್ನೆ ಮಧ್ಯಾಹ್ನ ಹಣ ಒಳಗೊಂಡ ಬ್ಯಾಗ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮೂವರು ಕಳ್ಳರು ಎರಡು ಬೈಕ್‌ಗಳಲ್ಲಾಗಿ ಅಲ್ಲಿಗೆ ಬಂದು ಕಳವುಗೈಯ್ಯುತ್ತಿರುವ ದೃಶ್ಯಗಳು ಪರಿಸರದ ಸಿಸಿ ಟಿವಿ ಕ್ಯಾಮರಾಗಳಲ್ಲಿ ಗೋಚರಿಸಿದೆ. ಕಳ್ಳರು ತಮ್ಮ ಎರಡು ಬೈಕ್‌ಗಳನ್ನು ರಸ್ತೆಯ ಇಕ್ಕಡೆಗಳಲ್ಲಾಗಿ ನಿಲ್ಲಿಸಿ ಕಳವಿಗಾಗಿ ಹೊಂಚು ಹಾಕಿ ಕಾದು ನಿಂತಿರುವ ಹಾಗೂ ಕಳವಿನ ನಂತರ ಬೈಕ್‌ಗಳು ಪಾಲಕುನ್ನಿನತ್ತ ಸಾಗುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಗೋಚರಿಸಿದೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಸಿಸಿ ಟಿವಿ ದೃಶ್ಯದ ಜಾಡು ಹಿಡಿದು ಕಳ್ಳರ ಪತ್ತೆಗಾಗಿರುವ ಶೋಧ ಆರಂಭಿಸಿದ್ದಾರೆ.