ಬೈಕ್‌ಗಳು ಪರಸ್ಪರ ಢಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ಇಬ್ಬರು ಗಂಭೀರ

ಕಾಸರಗೋಡು:  ಬೈಕ್‌ಗಳೆರಡು ಪರಸ್ಪರ ಢಿಕ್ಕಿ ಹೊಡೆದು ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಚಟ್ಟಂಚಾ ಲ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಚಟ್ಟಂಚಾಲ್ ತಾಯಲ್ ಬೆಂಡಿಚ್ಚಾಲ್  ಹೌಸ್‌ನ ಅಬ್ದುಲ್ ಗಫೂರ್-ಸಫಿಯಾ ದಂಪತಿಯ ಪುತ್ರ ಮಂಗಳೂರಿನಲ್ಲಿ ಬಿ.ಫಾಂ ವಿದ್ಯಾರ್ಥಿಯಾಗಿರುವ  ಮೊಹಮ್ಮದ್ ತಸ್ಲಿಮ್ (20) ಸಾವನ್ನಪ್ಪಿದ ದುರ್ದೈವಿ.

ನಿನ್ನೆ  ಸುಮಾರು 9 ಗಂಟೆ ವೇಳೆ ಚಟ್ಟಂಚಾಲ್ ಸಬ್ ಟ್ರಷರಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.  ಮೊಹಮ್ಮದ್ ತಸ್ಲೀಮ್ ಜತೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಆತನ ಸ್ನೇಹಿತ ಬೆಂಡಿಚ್ಚಾಲ್‌ನ ಶಫೀಕ್ (20) ಮತ್ತು ಇನ್ನೊಂದು ಬೈಕ್‌ನಲ್ಲಿ  ಪ್ರಯಾಣಿಸುತ್ತಿದ್ದ ಚಟ್ಟಂಚಾಲ್ ಕುನ್ನಾರದ   ಅಶ್‌ಫಾದ್ (22) ಈ ಅಪಘಾತದಲ್ಲಿ ಗಂಭೀರ ಗಾಯ ಗೊಂಡಿದ್ದು, ಅವರನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

 ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಮೇಲ್ಪರಂಬ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತ ಮೊಹಮ್ಮದ್ ತಸ್ಲೀಮ್ ಹೆತ್ತವರ ಹೊರತಾಗಿ ಸಹೋದರಿ ಫಾತಿಮತ್ ತೌರಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page