ಬೈಕ್‌ಗೆ ಕಾರು ಢಿಕ್ಕಿ ಯುವಕನಿಗೆ ಗಾಯ
ಕುಂಬಳೆ: ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಯುವಕ ಗಾಯಗೊಂಡ ಘಟನೆ ನಡೆದಿದೆ. ಬಾಡೂರು ಪಾಡಿಯ ವಿ.ಪಿ. ಸಂದೇಶ್ ಕುಮಾರ್ (21) ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಳೆದ ದಿನ ಮುಂಜಾನೆ ಬಾಡೂರು ಪದವು ಎಂಬಲ್ಲಿ ಅಪಘಾತವುಂ ಟಾಗಿತ್ತು. ಸಂದೇಶ್ ಕುಮಾರ್ ಚಲಾಯಿಸುತ್ತಿದ್ದ ಬೈಕ್‌ಗೆ ಎದುರು ಭಾಗದಿಂದ ಬಂದ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿ ರುವುದಾಗಿ ತಿಳಿಸಲಾಗಿದೆ.