ಬೈಕ್ ಕಳವು: ಇಬ್ಬರು ವಲಸೆ ಕಾರ್ಮಿಕರ ಸೆರೆ
ಕಾಸರಗೋಡು: ಹೊಸದುರ್ಗ ರೈಲು ನಿಲ್ದಾಣ ಸಮೀಪ ನಿಲ್ಲಿಸಲಾಗಿದ್ದ ಎರಡು ಬೈಕ್ಗಳನ್ನು ಕಳವುಗೈದ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ವಲಸೆ ಕಾರ್ಮಿ ಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ಹೊಸದಿಲ್ಲಿ ನಿವಾಸಿಗಳಾಗಿದ್ದು ಈಗ ಪಳ್ಳಿಕ್ಕೆರೆಯ ಕ್ವಾರ್ಟರ್ಸ್ವೊಂದ ರಲ್ಲಿ ವಾಸಿಸುತ್ತಿರುವ ಅಸ್ಲಾಂಖಾನ್ (೨೨) ಮತ್ತು ಮೊಹಮ್ಮದ್ ಫರ್ಹಾನ್ (೧೯) ಎಂಬಿವರು ಬಂಧಿತ ಆರೋಪಿ ಗಳಾಗಿದ್ದಾರೆ. ಅಗೋಸ್ತ್ ೨ ಮತ್ತು ೫ರಂದು ಎರಡು ಬೈಕ್ಗಳು ಹೊಸ ದುರ್ಗ ರೈಲು ನಿಲ್ದಾಣ ಸಮೀಪದಿಂದ ಕಳವುಹೋಗಿತ್ತು. ಅ.೨ರಂದು ಹೊಸ ದುರ್ಗ ತೋಯಮ್ಮಲ್ ನಿವಾಸಿ ಅಬ್ದುಲ್ ಅಸೀಸ್ ಎಂಬವರ ಬೈಕ್ ಕಳವುಗೈಯ್ಯಲ್ಪ ಟ್ಟರೆ, ಆ.೫ರಂದು ಕಾಸರಗೋಡು ಕೂಡ್ಲು ನಿವಾಸಿ ಮೊಹಮ್ಮದ್ ಸಾಲಿ ಎಂಬವರ ಬೈಕ್ ಕಳವುಹೋಗಿತ್ತು.