ಬೈಕ್ ತಡೆದು ನಿಲ್ಲಿಸಿ ಯುವಕನ ಮೇಲೆ ಹಲ್ಲೆ: ಮೂವರ ಸೆರೆ
ಕಾಸರಗೋಡು: ಅಣಂಗೂರು ಬಳಿಯ ಜೆ.ಪಿ ನಗರ ಕಾಲನಿ ರಸ್ತೆಯಲ್ಲಿ ಜನವರಿ 24ರಂದು ಜೆ.ಪಿ ನಗರದ ವಿಜೇಶ್ ಆರ್. (31) ಚಲಾಯಿಸುತ್ತಿದ್ದ ಬೈಕ್ ತಡೆದು ನಿಲ್ಲಿಸಿ ಹಲ್ಮೆಟ್ ಮತ್ತು ಬೆತ್ತದಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಮೀಪುಗುರಿ ನಿವಾಸಿಗಳಾದ ಮಿಥುನ್‌ರಾಜ್ (27), ನವೀನ್ ಕುಮಾರ್ (45) ಮತ್ತು ಕರಂದಕ್ಕಾಡಿನ ದಿನೇಶ್ (24) ಎಂಬವರು ಬಂಧಿತ ಆರೋಪಿಗಳು.
ಕಾಸರಗೋಡು ಡಿವೈಎಸ್‌ಪಿ ನಿರ್ದೇಶ ಪ್ರಕಾರ ಎಸ್‌ಐ ಪ್ರತೀಶ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.