ಬೈಕ್ ನಿಯಂತ್ರಣ ತಪ್ಪಿ ಅಪಘಾತ: ಯುವಕ ಮೃತ್ಯು

ಕಾಸರಗೋಡು: ಸಾಮಗ್ರಿಗಳೊಂ ದಿಗೆ ಮನೆಗೆ ತೆರಳುತ್ತಿದ್ದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಕಳ್ಳಾರ್ ಜುಮಾ ಮಸೀದಿ ಸಮೀಪ ನಿವಾಸಿ ಅಶ್ರಫ್ ಎಂಬವರ ಪುತ್ರ ಮುಹಮ್ಮದ್ ಅಸ್ಕರ್ (೨೧) ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ೬ ಗಂಟೆ ವೇಳೆ ಕಳ್ಳಾರ್ ಪೇಟೆಯಲ್ಲಿ ಅಪಘಾತ ಸಂಭವಿಸಿದೆ.  ನಿಯಂತ್ರಣ ತಪ್ಪಿದ ಬೈಕ್ ಗೋಡೆಗೆ ಬಡಿದು ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಸ್ಕರ್‌ರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ಚಿಕಿತ್ಸೆ ಮಧ್ಯೆ ಅಲ್ಲಿ ರಾತ್ರಿ ವೇಳೆ ನಿಧನ ಸಂಭವಿಸಿದೆ. ಅಲ್ಪ ಕಾಲ ಗಲ್ಫ್‌ನಲ್ಲಿದ್ದ ಅಸ್ಕರ್ ಊರಿಗೆ ಮರಳಿ ಆಯುರ್ವೇದ ಔಷಧಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಕ್ರಿಯವಾಗಿದ್ದರು. ಈ ಮಧ್ಯೆ ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಮೃತರು ತಾಯಿ ಜಮೀಲ, ಸಹೋದರ ಸಹೋದರಿಯರಾದ ಶರಫುದ್ದೀನ್, ಅಶ್ರೀಫ ಮೊದಲಾದವರನ್ನು ಅಗಲಿದ್ದಾರೆ.

You cannot copy contents of this page