ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಮಹಾ ಶಿವರಾತ್ರಿ ಆಚರಣೆ
ಕಾಸರಗೋಡು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿ ದ್ಯಾಲಯದ ಆಶ್ರಯದಲ್ಲಿ ಅಣಂಗೂರಿ ನಲ್ಲಿ ಮಹಾಶಿವರಾತ್ರಿ ಆಚರಿಸಲಾ ಯಿತು. ಶಿವಧ್ವಜಾರೋಹಣ, ದೀಪ ಪ್ರಜ್ವಲನೆ, ನೃತ್ಯ ಕಾರ್ಯಕ್ರಮ, ಗೌರವಾರ್ಪಣೆ ಎಂಬಿವು ನಡೆಯಿತು. ಸಭೆಯಲ್ಲಿ ಅನಿತ (ಜಲ ಪ್ರಾಧಿಕಾರ), ಗೀತಾ ಜಿ. (ನಿವೃತ್ತ ಪ್ರಾಂಶುಪಾಲೆ), ಬಿ.ಕೆ. ವಿಜಯಲಕ್ಷ್ಮಿ (ಬ್ರಹ್ಮಕುಮಾರಿ ವಿಶ್ವವಿ ದ್ಯಾಲಯ), ನಿವೃತ್ತ ಅಗ್ರಿ ಅಸಿ ಸ್ಟೆಂಟ್ ಡೈರೆಕ್ಟರ್ ಅನಿಲ್ ಕುಮಾರ್, ಬಿಂದು, ಡಾ. ಸುಬ್ರಹ್ಮಣ್ಯನ್, ಬಿ.ಕೆ. ಮಂ ಗಳ, ಬಿ.ಕೆ. ಪ್ರೇಮ, ಅನುಷ ಮಾತನಾ ಡಿದರು. ಅಶಿಕ, ಅಕ್ಷತ್ ನೃತ್ಯ ಪ್ರದರ್ಶಿಸಿದರು.