ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ಪ್ರತಿಭಾವಂತ ಯುವ ಜನತೆಗೆ ಅಭಿನಂದನೆ
ಮಂಜೇಶ್ವರ: ರಾಷ್ಟ್ರೀಯ ಯುವ ದಿನದಂಗವಾಗಿ ಹೊಸಂಗಡಿ ಬ್ರಹ್ಮಕು ಮಾರೀಸ್ ಈಶ್ವರೀಯ ವಿಶ್ವವಿದ್ಯಾಲ ಯದ ವತಿಯಿಂದ ಪ್ರತಿಭಾವಂತ ಯುವಜನರನ್ನು ಅಭಿನಂದಿಸುವ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಬ್ರಹ್ಮಕುಮಾರೀಸ್ ಕಾಸರಗೋಡು ಇದರ ಕೋ-ಆರ್ಡಿನೇಟರ್ ಬಿ.ಕೆ. ವಿಜಯಲಕ್ಷ್ಮಿ ಪ್ರಧಾನ ಭಾಷಣ ಮಾಡಿ ದರು. ಭಾರ ಎತ್ತುವಿಕೆ, ಕರಾಟೆ, ಹರಿಕತೆ, ಭಗವದ್ಗೀತೆ, ಕಂಠಪಾಠ, ಡ್ಯಾನ್ಸ್, ಯಕ್ಷಗಾನ ಮೊದಲಾದವುಗಳಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಯುವಜನತೆಯನ್ನು ಅಭಿನಂದಿಸಲಾ ಯಿತು. ಬಿ.ಕೆ. ಮಂಗಳ ಅಭಿನಂದಿ ಸಿದರು. ಬಿ.ಕೆ. ತನುಜ ಸ್ವಾಗತಿಸಿ, ಬಿ.ಕೆ. ವಿನೋದ ವಂದಿಸಿದರು.