ಭಜನಾ ಮಂದಿರದಿಂದ ಕಳವು

ಕುಂಬಳೆ: ಬಂಬ್ರಾಣ ಬತ್ತೇರಿ ಶಿವಾಜಿನಗರದ ಶ್ರೀ ವೀರಾಂಜ ನೇಯ ಭಜನಾ ಮಂದಿರದಲ್ಲಿ ಕಳವು ನಡೆದಿದೆ. ಮಂದಿರದ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯನ್ನು ದೋ ಚಿದ್ದಾರೆ.  ಹುಂಡಿಯಲ್ಲಿ ಸುಮಾರು ೫೦ ಸಾವಿರ ರೂಪಾಯಿಗಳಿದಿ ರಬಹುದೆಂದು ಅಂದಾಜಿಸಲಾಗಿದೆ.

ಮೊನ್ನೆ ರಾತ್ರಿ ಈ ಕಳವು ನಡೆದಿದೆ  ಎನ್ನಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಇದು ಅರಿವಿಗೆ ಬಂದಿದೆ. ಈ ಬಗ್ಗೆ ಕುಂಬಳ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಲಾಗಿದೆ.

ಕೋಲ್ಲಾಪುರದಲ್ಲಿ ಪ್ರಬಲ ಭೂಕಂಪ

ಮುಂಬೈ: ಮಹಾರಾಷ್ಟ್ರದ ಕೋಲ್ಲಾಪುರದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ೩.೪ ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ತಿಳಿಸಿದೆ. ಇಂದು ಬೆಳಿಗ್ಗೆ ೬.೪ಕ್ಕೆ ಭೂಮಿಯಿಂದ ೫ ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿ ಸಿದೆ. ಭೂಕಂಪದಿಂದ ಯಾವುದೇ ಹಾನಿಯ ಬಗ್ಗೆ ವರದಿ ಲಭಿಸಿಲ್ಲ.

Leave a Reply

Your email address will not be published. Required fields are marked *

You cannot copy content of this page