ಭಜನಾ ಮಂದಿರ ವಾರ್ಷಿಕ: ಮಕ್ಕಳ ಕಾರ್ಯಕ್ರಮದ ವೀಡಿಯೋ ಚಿತ್ರೀಕರಿಸಿದ ಹೆಸರಲ್ಲಿ ಯುವಕನಿಗೆ ಹಲ್ಲೆಗೈದ ಆರೋಪಿ ಸೆರೆ
ಹೊಸದುರ್ಗ: ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕ ದಂಗವಾಗಿ ಮಕ್ಕಳ ಕಲಾ ಕಾರ್ಯಕ್ರಮಗಳು ನಡೆಯುತ್ತಿದ್ದಂತೆ ವೀಡಿಯೋ ಚಿತ್ರೀಕರಿಸಿದ ಹೆಸರಲ್ಲಿ ಯುವಕನ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ ಪ್ರಕರಣದ ಆರೋಪಿಯನ್ನು ಸೆರೆಹಿಡಿಯ ಲಾಗಿದೆ. ಪುಲ್ಲೂರು ಪೆರಿಯ ಚಾಲಿಂಗಾಲ್ನ ಮಣಿ (30) ಎಂಬಾತನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಡಿ. 22ರಂದು ರಾತ್ರಿ 11 ಗಂಟೆಗೆ ಘಟನೆ ನಡೆದಿತ್ತು. ಘರ್ಷಣೆಯಲ್ಲಿ ಕಾಞಂಗಾಡ್ ಗುರುವನದ ಮುಹಮ್ಮದ್ ಇಜಾಸ್ (22) ಗಾಯಗೊಂಡಿದ್ದರು.
ಚಾಲಿಂಗಾಲ್ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಹಮ್ಮದ್ ಇಜಾಸ್ ಸ್ನೇಹಿತರೊಂದಿಗೆ ತಲುಪಿ ದ್ದರೆನ್ನಲಾಗಿದೆ. ಅವರು ಆಹಾರ ಸೇವಿಸುತ್ತಿದ್ದಾಗ ಅಲ್ಲಿಗೆ ತಲುಪಿದ ಮಣಿ ಚೆಯರ್ನಿಂದ ತಲೆಗೆ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ. ವಾರ್ಷಿಕದಂಗವಾಗಿ ಹಿಂದಿನ ದಿನ ಮಕ್ಕಳ ಕಲಾ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು. ಅದರ ವೀಡಿಯೋ ಚಿತ್ರೀಕರಿಸಿದ ಹೆಸರಲ್ಲಿ ಉಂಟಾದ ತರ್ಕವೇ ಹಲ್ಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.