ಭಾರತಕ್ಕೂ ಹರಡಿದೆ ಚೀನಾದ ಎಚ್‌ಎಂಪಿವಿ ವೈರಸ್
ಬೆಂಗಳೂರು: ಚೀನಾದಲ್ಲಿ ಶರವೇಗದಲ್ಲಿ ಹರಡುತ್ತಿರುವ ಹ್ಯೂಮನ್ ಮೆಟಾ ಫ್ನ್ಯೊಮೋ ವೈರಸ್ (ಎಚ್‌ಎಂಪಿವಿ) ಇದೀಗ ಭಾರತಕ್ಕೂ ಕಾಲಿರಿಸಿದೆ. ಬೆಂಗಳೂ ರಿನ ಎಂಟು ತಿಂಗಳ ಹಸುಳೆಯಲ್ಲಿ ಈ ವೈರಸ್ ಸೋಂಕು ಪತ್ತೆಯಾಗಿರುವುದು ಎಲ್ಲರನ್ನೂ ಆತಂಕಗೊಳಿಸತೊಡಗಿದೆ.
ಜ್ವರದ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಕ್ತ ಪರೀಕ್ಷೆಯಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿದೆ. ಆದರೆ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಜಗತ್ತನ್ನೇ ನಡುಗಿಸಿ ಭಾರತ ಸೇರಿದಂತೆ ವಿಶ್ವಾದ್ಯಂತವಾಗಿ ಲಕ್ಷಾಂತರ ಮಂದಿಯ ಪ್ರಾಣ ಅಪ ಹರಿಸಿದ ಕೊರೊನಾ ವೈರಸ್ ಚೀನಾ ದಿಂದಲೇ ಹರಡಿತ್ತು. ಅದಾದ ಬೆನ್ನಲ್ಲೇ ಈಗ ಅಲ್ಲಿಂದಲೇ ಎಚ್‌ಎಂಪಿವಿ ವೈರಸ್ ಹರಡತೊಡಗಿದೆ. ಭಾರತ ಸೇರಿ ಎಲ್ಲಾ ದೇಶಗಳಲ್ಲೂ ಈ ಬಗ್ಗೆ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವೂ ಈ ಬಗ್ಗೆ ಭಾರೀ ಮುನ್ನಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲೂ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶ ನೀಡಿದೆ. ಇದರಿಂ ದಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸುವಂತೆ ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ವಿನಂತಿಸಿದ್ದಾರೆ.
ಎಚ್‌ಎಂಪಿವಿ ಉಸಿರಾಟದ ಮೇಲೆ ಪರಿಣಾಮ ಬೀರುವ ವೈರಸ್ ಆಗಿದೆ. ಇದು ಸೌಮ್ಯ ಶೀತದಿಂದ ಹಿಡಿದು ನ್ಯೂಮೋನಿಯಾ ಮತ್ತು ಬ್ರಾಂಕಿಯೋಲಿಟಿಸ್‌ನಂತಹ ತೀವ್ರ ಶ್ವಾಸಕೋಶದ ಸೋಂಕುಗಳವರೆಗೆ ಕಾಯಿಲೆ ಉಂಟುಮಾಡುತ್ತ್ತದೆ. ಚಳಿಗಾಲ ಮತ್ತು ವಸಂತಕಾಲದಲ್ಲಿ ಇದು ವಿಶೇಷವಾಗಿ ಹರಡುತ್ತ್ತದೆ. ಅದರಲ್ಲೂ ಚಿಕ್ಕ ಮಕ್ಕಳು, ವಯೋವೃದ್ಧರು, ಗರ್ಭಿಣಿಯರು ಮತ್ತು ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿದವರಿಗೆ ಈ ವೈರಸ್ ಗಮನಾರ್ಹ ರೀತಿಯ ತೊಂದರೆ ಉಂಟುಮಾಡುತ್ತಿದೆಯೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಮ್ಮು, ಜ್ವರ, ಮೂಗುಕಟು ವಿಕೆ, ಉಸಿರಾಟ ತೊಂದರೆ, ದೇಹದಲ್ಲಿ ನೋವು, ತಲೆನೋವು ಇದರ ಪ್ರಧಾನ ಲಕ್ಷಣಗಳಾಗಿವೆ. ಎಚ್‌ಎಂಪಿವಿಗೆ ಯಾವುದೇ ನಿರ್ಧಿಷ್ಟ ಚಿಕಿತ್ಸೆಯಿಲ್ಲ. ವಿಶ್ರಾಂತಿ ಹಾಗೂ ಹೆಚ್ಚು ದ್ರವಾಹಾರ ಸೇವನೆ, ಜ್ವರ ನಿವಾರಕಗಳನ್ನು ಇದಕ್ಕೆ ಬಳಸಲಾಗುತ್ತಿದೆ. ಈ ಸೋಂಕು ತಗಲಿದವರಿಂದ ಇತರರು ಅಂತರ ಪಾಲಿಸಬೇಕಾಗಿರುವುದು ಅನಿವಾ ರ್ಯವಾಗಿದೆಯೆಂದು ಆರೋಗ್ಯಾಧಿ ಕಾರಿಗಳು ಸಲಹೆ ನೀಡಿದ್ದಾರೆ.