ಭಾರತದಲ್ಲಿ ಬೇಹುಗಾರಿಕೆ ನಡೆಸಲು ೩೮ ನಕಲಿ ಆಧಾರ್ ಕಾರ್ಡ್ ಪತ್ತೆ: ೫ ಕಾರ್ಡ್ ಪಡೆದಿದ್ದು ಮಲಪ್ಪುರದಿಂದ, ಸಮಗ್ರ ತನಿಖೆ ಆರಂಭ

ಕಾಸರಗೋಡು: ಭಾರತದಲ್ಲಿ ಬೇಹುಗಾರಿಕೆ ನಡೆಸಲು ಉಗ್ರಗಾಮಿ ಗಳು ನಕಲಿ  ಆಧಾರ್ ಕಾರ್ಡ್‌ಗಳನ್ನು ಬಳಸಿ ದೇಶದೊಳಗೆ ನುಗ್ಗಿದ್ದಾರೆಂದೂ,   ಹೀಗೆ ತಯಾರಿಸಲಾದ ೩೮ ನಕಲಿ ಆಧಾರ್ ಕಾರ್ಡ್‌ಗಳನ್ನುಕೇಂದ್ರ ಗುಪ್ತಚರ ವಿಭಾಗ ಪತ್ತೆಹಚ್ಚಿ ಬಳಿಕ  ಅದನ್ನು ರದ್ದುಪಡಿಸಲಾಗಿದೆ.

ಈ ಪೈಕಿ ೫ ನಕಲಿ ಆಧಾರ್ ಕಾರ್ಡ್‌ಗಳನ್ನು  ಮಲಪ್ಪುರಂ ಜಿಲ್ಲೆಯ ತಿರೂರ್‌ನ ಅಕ್ಷಯ ಕೇಂದ್ರವೊಂದರ  ಮೂಲಕ ತಯಾರಿಸಲಾಗಿದೆ ಎಂಬ ಮಾಹಿತಿ  ಕೇಂದ್ರ ಗುಪ್ತಚರ ವಿಭಾಗಕ್ಕೆ  ಲಭಿಸಿದೆ. ಇನ್ನೊಂದೆಡೆ ಕೇರಳ ಸೈಬರ್ ಕ್ರೈಂ ವಿಭಾಗವೂ ಈ ಬಗ್ಗೆ  ಸಮಗ್ರ  ತನಿಖೆ ಆರಂಭಿಸಿದೆ.

ಯುನೀಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯ ನಡೆಸಿದ ಪರಿಶೀಲನೆಯಲ್ಲಿ ಈ ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ೫ ನಕಲಿ ಆಧಾರ್ ಕಾರ್ಡ್‌ಗಳನ್ನು ತಿರೂರ್ ಆಲಿಂಗಾಲ್ ಅಕ್ಷಯ ಕೇಂದ್ರವೊಂದರಲ್ಲಿ ಜನವರಿ ೧೮ರಂದು ಆ ಕೇಂದ್ರದ ಆಧಾರ್ ಕಾರ್ಡ್ ಯಂತ್ರವನ್ನು ಹ್ಯಾಕ್ ಮಾಡಿ  ನಿರ್ಮಿಸಲಾಗಿದೆ. ದಿಲ್ಲಿಯ ಯುಐಡಿ ಅಡ್ಮಿನ್ ಎಂದು ಪರಿಚಯಪಡಿಸಿದ ವ್ಯಕ್ತಿಯೋರ್ವ ಈ ಅಕ್ಷಯ ಕೇಂದ್ರಕ್ಕೆ ಫೋನ್ ಕರೆ ಮಾಡಿದ್ದಾನೆ.  ೧೦ ಸಾವಿರ ಎನ್‌ರೋಲ್‌ಮೆಂಟ್ ಪೂರ್ಣಗೊಂ ಡಲ್ಲಿ ಅದನ್ನು ವೆರಿಫಿಕೇಶನ್ ನಡೆಸಬೇಕಾಗಿದೆ.  ವೆರಿಫಿಕೇಶನ್‌ನಂಗ ವಾಗಿ ದಸ್ಕ್ ಎಂಬ ಸಾಫ್ಟ್ ವೇರ್ ಕನೆಕ್ಟ್ ಮಾಡುವಂತೆ ಫೋನ್ ಕರೆದ ವ್ಯಕ್ತಿ ಅಕ್ಷಯ ಕೇಂದ್ರದವರಿಗೆ ತಿಳಿಸಿದ್ದಾನೆ. ಮಾತ್ರವಲ್ಲ ಆ ಮಧ್ಯೆ ತಮಗೆ ಕೆಲವು  ವ್ಯಕ್ತಿಗಳ ಆಧಾರ್ ಕಾರ್ಡ್‌ನ್ನು ಎನ್‌ರೋಲ್ ಮಾಡಬೇ ಕಾಗಿದೆ ಆ ಬಳಿಕವಷ್ಟೇ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆಯೆಂದು ಆ ವ್ಯಕ್ತಿ ತಿಳಿಸಿದ್ದಾನೆ.  ಅದರಂತೆ ಅಕ್ಷಯ ಕೇಂದ್ರದವರು ಆ ಕೆಲಸವನ್ನು ನಿರ್ವಹಿಸಿದರು.  ಆ ಬಳಿಕ ಪರಿಶೀಲನೆ ಕ್ರಮ ಪೂರ್ಣಗೊಂಡಿದೆಯೆಂದು ಹೇಳಿ ಫೋನ್ ಕರೆದ ವ್ಯಕ್ತಿ ತಕ್ಷಣ ಫೋನ್ ಕಟ್ ಮಾಡಿದ್ದಾನೆ. ನಂತರ ಪ್ರೊಜೆಕ್ಟ್ ಆಫೀಸ್‌ನಿಂದ ಅಕ್ಷಯ ಕೇಂದ್ರಕ್ಕೆ ಮೈಲ್ ಸಂದೇಶ ಬಂದಾಗಲಷ್ಟೇ ನಡೆದ ವಂಚನೆ ಅಕ್ಷಯ ಕೇಂದ್ರದವರ ಗಮನಕ್ಕೆ ಬಂದಿದೆ.

ಈ ಅಕ್ಷಯ ಕೇಂದ್ರದಲ್ಲಿ ಆಧಾರ್ ಕಾರ್ಡ್ ಪಡೆದ ಹಲವರ ಹೆಸರು ಮತ್ತು ವಿಳಾಸವನ್ನು ಬಳಸಿ ಈ ರೀತಿ ೩೮ ನಕಲಿ ಆಧಾರ್ ಕಾರ್ಡ್ ಗಳನ್ನು ಉಗ್ರಗಾಮಿಗಳು ಬೇಹುಗಾರಿಕೆ ನಡೆಸಲು ನಿರ್ಮಿಸಿದ್ದಾರೆಂಬ ಕಳವಳ ಕಾರಿ ಮಾಹಿತಿ  ಬಳಿಕ ತನಿಖಾ ತಂಡಕ್ಕೆ ಲಭಿಸಿದೆ. ಆ ಎಲ್ಲಾ ನಕಲಿ ಕಾರ್ಡ್ ಗಳನ್ನು ಬಳಿಕ ರದ್ದುಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page