ಭಾರತದ ಸಂವಿಧಾನ ಅವಹೇಳನಕ್ಕೀಡಾಗಿರುವುದು ಇಂದಿರಾ ಗಾಂಧಿ ಆಡಳಿತದಲ್ಲಿ-ಎ.ಪಿ. ಅಬ್ದುಲ್ಲಕುಟ್ಟಿ

ಕಾಸರಗೋಡು: ಸ್ವಾತಂತ್ರ್ಯದ ಬಳಿಕ ಭಾರತ ದಲ್ಲಿ ಭಾರತೀಯ ಸಂವಿಧಾನವನ್ನು ಅವಹೇಳನ ಗೈದಿರುವುದು ಇಂದಿರಾ ಗಾಂಧಿಯ ಆಡಳಿತ ಕಾಲದಲ್ಲಾಗಿದೆಯೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಅಭಿಪ್ರಾಯ ಪಟ್ಟರು. ತುರ್ತು ಪರಿಸ್ಥಿತಿ ವಿರುದ್ಧ ದಿನದಂದು ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಚಿಂತಾಸದಸ್ ಉದ್ಘಾಟಿಸಿ ಅವರು ಮಾತನಾಡಿ ದರು. ಪೌರ-ಪತ್ರಿಕಾ ಸ್ವಾತಂತ್ರ್ಯ ನಿಷೇಧಿಸಿ, ಸಂವಿಧಾನವನ್ನು ಛಿನ್ನಭಿನ್ನ ಮಾಡಿದ ಕಾಲವಾಗಿತ್ತು ತುರ್ತು ಪರಿಸ್ಥಿತಿ ದಿನಗಳೆಂದು ಅವರು ನುಡಿದರು. ಇಂದಿರಾ ಗಾಂಧಿ ಏಕಾಂಗಿಯಾಗಿ ಸಂವಿಧಾನದ ಮುಖವನ್ನು ತಿದ್ದುಪಡಿಗೊಳಿಸಿದ್ದರು. ಸ್ವಾತಂತ್ರ್ಯದ ಬಳಿಕ 106 ಬಾರಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಲಾಗಿದೆ. ಅದರಲ್ಲಿ ಹೆಚ್ಚು ತಿದ್ದುಪಡಿ ಉಂಟಾ ಗಿರುವುದು ಕಾಂಗ್ರೆಸ್‌ನ ಆಡಳಿತದಲ್ಲಾಗಿದೆಯೆಂದು ಅಬ್ದುಲ್ಲಕುಟ್ಟಿ ನುಡಿದರು. 90 ಬಾರಿ ಚುನಾಯಿತ ರಾಜ್ಯ ಸರಕಾರಗಳನ್ನು ಅಮಾನತುಗೊಳಿಸಿದವರು ಕಾಂಗ್ರೆಸ್‌ನವರಾಗಿದ್ದಾರೆ. ಇಂದಿರಾ ಗಾಂಧಿ ಅವರಂತೆ ಸಂವಿಧಾನ ಹಾಗೂ ಸಂಸತ್ತನ್ನು ಅವಹೇಳನಗೈದ ಇನ್ನೋರ್ವ ಮುಖಂಡ ಭಾರತದ ಇತಿಹಾಸದಲ್ಲಿ ಇಲ್ಲವೆಂದು ಅವರು ಆರೋಪಿಸಿದರು.

ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಅಧ್ಯಕ್ಷತೆ ವಹಿಸಿದರು. ಕಲ್ಲಿಕೋಟೆ ವಲಯ ಅಧ್ಯಕ್ಷ ಜಯಚಂದ್ರನ್ ಪ್ರಧಾನ ಭಾಷಣ ಮಾಡಿದರು. ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ತುರ್ತು ಪರಿಸ್ಥಿತಿಯ ಸಮಯಗಳಲ್ಲಿನ ಹೋರಾಟದ ಬಗ್ಗೆ ಮಾಹಿತಿ ನೀಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್, ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ವಲಯ ಕಾರ್ಯದರ್ಶಿ ಪಿ.ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ವೇಲಾ ಯುಧನ್ ಸ್ವಾಗತಿಸಿ, ಸೆಲ್ ಕೋ ಆರ್ಡಿನೇಟರ್ ಎನ್. ಬಾಬುರಾಜ್ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page