ಭಾರತ ವಿಶ್ವಕಪ್ ಗೆದ್ದರೆ ನಗ್ನವಾಗಿ ಬೀಚ್‌ನಲ್ಲಿ ಓಡುವುದಾಗಿ ನಟಿ ರೇಖಾ ಭೋಜ್

ವಿಶಾಖಪಟ್ಟಣ: ಭಾರತ ತಂಡ ಏಕದಿನ ವಿಶ್ವಕಪ್‌ಗೆ ಮುತ್ತು ನೀಡಿದರೆ ವಿಶಾಖಪಟ್ಟಣ ಬೀಚ್‌ನಲ್ಲಿ ನಗ್ನವಾಗಿ ಓಡುವುದಾಗಿ ತೆಲುಗು ನಟಿ ರೇಖಾ ಭೋಜ್ ಘೋಷಿಸಿದ್ದಾರೆ. ಇಬ್ಬರ ಎಫ್‌ಬಿಯಲ್ಲಿ ಈ ಘೋಷಣೆ ನಟಿ ಬಹಿರಂಗಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿಯ ಬಗ್ಗೆ ಕಮೆಂಟ್‌ಗಳೂ ಪ್ರತ್ಯಕ್ಷವಾಗಿವೆ. ಪ್ರಚಾರಕ್ಕಾಗಿ ಈಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಮೆಂಟಿಗರು ಆರೋಪಿಸಿದ್ದಾರೆ. ಆದರೆ ನನ್ನ ಈ ಘೋಷಣೆಯಿಂದ ಭಾರತದ ವಿರೋಧಿಗಳು ಕೂಡಾ ಭಾರತ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆಂದು ನಟಿ ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಭಾರತ ತಂಡದೊಂದಿಗಿನ ಅಭಿಮಾನದಿಂದ ಈ ಹೇಳಿಕೆ ನೀಡಿರುವುದಾಗಿ ನಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page