ಭೀಕರ ಅಪಘಾತ: ೧೩ ಮಂದಿ ಸ್ಥಳದಲ್ಲೇ ಮೃತ್ಯು

ಚಿಕ್ಕಬಳ್ಳಾಪುರ: ಸಿಮೆಂಟ್ ಬಲ್ಕರ್‌ಗೆ ಟಾಟಾ ಸುಮೋ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ  ದುರಂತದಲ್ಲಿ ಮಗು ಸಹಿತ ೧೩ ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಇಂದು ಮುಂಜಾನೆ ೭ ಗಂಟೆಗೆ ಊರನ್ನೇ ನಡುಗಿಸಿದ ದುರಂತ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ೪೪ರಲ್ಲಿ ಚಿತ್ರಾವತಿ ಬಳಿ ಅಪಘಾತ ಸಂಭವಿಸಿದೆ. ಟಾಟಾ ಸುಮೋ ಆಂಧ್ರ ಪ್ರದೇಶದಿಂದ ಬೆಂಗಳೂರಿನತ್ತ ತೆರಳುತ್ತಿತ್ತು. ಈ ವಾಹನದಲ್ಲಿದ್ದ ೧೩ ಮಂದಿ ಕೂಡಾ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಂದು ಮಗು, ಮೂವರು ಮಹಿಳೆಯರು, ಎಂಟು ಮಂದಿ ಪುರುಷರು ಒಳಗೊಂಡಿದ್ದಾರೆ. ಇವರ ಪೈಕಿ ೬ ಮಂದಿಯ ಗುರುತು ಈ ವೇಳೆಗೆ ಪತ್ತೆಹಚ್ಚಲಾಗಿದೆ.

ದೊಡ್ಡಬಳ್ಳಾಪುರದ ಅರುಣಾ, ಇವರ ಪುತ್ರ ಋತ್ವಿಕ್, ಆಂಧ್ರಪ್ರದೇಶದ ಕೊತ್ತಚೆರು ನಿವಾಸಿ ಪೆರುಮಾಳ್ ಪವನ್ ಕುಮಾರ್, ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸುಬ್ಬಮ್ಮ, ಬಾಗೇತಲ್ಲಿಯ ಮಾರ್ಗಾನುಕುಂಟಿಯ ನರಸಿಂಹಮೂರ್ತಿ, ಟಾಟಾಸುಮೋ ಚಾಲಕ ನರಸಿಂಹಪ್ಪ ಮೃತಪಟ್ಟವರು.

Leave a Reply

Your email address will not be published. Required fields are marked *

You cannot copy content of this page