ಭೂಮಿ ಅತಿಕ್ರಮಣ: ಶಾಸಕ ಮಾಥ್ಯು : ಕುಳಲ್‌ನಾಡನ್ ವಿರುದ್ಧ ಕೇಸು ದಾಖಲು

ಇಡುಕ್ಕಿ: ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿ ಶಾಸಕ ಮ್ಯಾಥ್ಯು ಕುಳಲ್  ನಾಡನ್ ವಿರುದ್ಧ ಕಂದಾಯ ಇಲಾಖೆ ಕೇಸು ದಾಖಲಿಸಿಕೊಂಡಿದೆ. ಚಿನ್ನಕ್ಕನಾಲ್‌ನಲ್ಲಿ ೫೦ ಸೆಂಟ್ ಪುರಂಬೋಕ್ ಭೂಮಿಯನ್ನು ಕೈವಶವಿರಿಸಿಕೊಂಡಿರುವುದಾಗಿ ತಿಳಿಸಿ ಕಂದಾಯ ಇಲಾಖೆ  ಈ ಕ್ರಮ ಕೈಗೊಂಡಿದೆ.  ಹಿಯರಿಂಗ್‌ಗೆ ಹಾಜರಾಗಬೇಕೆಂದು ತಿಳಿಸಿ ಕಂದಾಯ ಇಲಾಖೆ ನೋಟೀಸ್ ನೀಡಿರುತ್ತದೆ. ಚಿನ್ನಕ್ಕನಾಲ್‌ನ ಪುರಂಬೋಕ್ ಸ್ಥಳವನ್ನು ವಶಪಡಿಸಲು ಜಿಲ್ಲಾಧಿಕಾರಿ ಶೀಬಾ ಜೋರ್ಜ್ ಉಡುಂಬನ್ ಚೋಲ ತಹಶೀಲ್ದಾರ್‌ಗೆ ಈ ಹಿಂದೆಯೇ ಅನುಮತಿ ನೀಡಿದ್ದರು. ಶಾಸಕನ ಹೆಸರಲ್ಲಿ ‘ಕಪ್ಪಿತ್ತಾನ್ಸ್’ ರಿಸೋರ್ಟ್ ಸಹಿತ ೧ ಎಕರೆ ೨೦ ಸೆಂಟ್ ಸ್ಥಳ ದಾಖಲೆಯಲ್ಲಿದೆ. ಇದರಲ್ಲಿ ೫೦ ಸೆಂಟ್ಸ್ ಸರಕಾರಿ ಭೂಮಿಯನ್ನು ಅತಿಕ್ರಮಿಸಿರುವುದಾಗಿ ವಿಜಿಲೆನ್ಸ್ ತನಿಖೆಯಲ್ಲಿ ಪತ್ತೆಹಚ್ಚಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page