ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಡೆಂಟಲ್ ಯೂನಿಟ್ಗೆ ಆಡಳಿತಾತ್ಮಕ ಅನುಮತಿ
ಮಂಗಲ್ಪಾಡಿ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ನೂತನ ಡೆಂಟಲ್ ಯೂನಿಟ್ ಆರಂಭಿಸಲು ಆರೋಗ್ಯ ಇಲಾಖೆ ಆಡಳಿತಾತ್ಮಕ ಅನುಮತಿ ನೀಡಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು. ಏರ್ವ ಡೆಂಟಲ್ ಸರ್ಜನ್, ಡೆಂಟಲ್ ಮೆಕ್ಯಾನಿಕ್ ಎಂಬೀ ಹುದ್ದೆಗಳೊಂದಿಗೆ ಡೆಂಟಲ್ ವಿಂಗ್ ಸ್ಪೆಷಾಲಿಟಿ ಆರಂಭಿಸಲಾಗುವುದು. ದಂತ ಚಿಕಿತ್ಸೆಗೆ ಸೌಕರ್ಯದ ಕೊರತೆಯಿಂದ ರೋಗಿಗಳು ಎದುರಿಸುತ್ತಿರುವ ತೊಂದರೆಗೆ ಪರಿಹಾರ ದೊರೆಯಲಿದ್ದು, ಭೌತಿಕ ಸೌಲಭ್ಯಗಳನ್ನು ಒದಗಿಸಿ ಶಾಸಕರ ನಿಧಿಯಿಂದ ಅನುಮತಿಸಿದ ಐಸೋಲೇಶನ್ ವಾರ್ಡ್ ಕಟ್ಟಡದಲ್ಲಿ ಡೆಂಟಲ್ ಯೂನಿಟ್ ಸ್ಥಾಪಿಸಲು ಸಂಬAಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.