ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳೆದೊಂದು ವಾರದಿಂದ ನಡೆಯು ತ್ತಿರುವ ವಿವಿಧ ಹೋಮಗಳು, ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾ ಯಾಗ ಇಂದು ಮಧ್ಯಾಹ್ನ ಸಂಪನ್ನಗೊಂಡಿತು. ಮಾರ್ಚ್ ೨೬ರಂದು ಸಂಜೆ ಉಗ್ರಾಣ ಮುಹೂರ್ತದೊಂದಿಗೆ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿತ್ತು. ೨೭ರಂದು ಬೆಳಿಗ್ಗೆ ಋಕ್ ಸಂಹಿತಾ ಯಾಗ ಪ್ರಾರಂಭಗೊಂ ಡಿತ್ತು. ಇಂದು ಪ್ರಾತಃಕಾಲ ಅಗ್ನಿ ಪ್ರತಿಷ್ಠೆ, ಸಹಸ್ರ ಚಂಡಿಕಾ ಯಾಗ ಆರಂಭಗೊಂ ಡಿದ್ದು, ೬ಬಳಿಕ ಋಕ್ ಸಂಹಿತಾ ಯಾಗ ಹಾಗೂ ಸಹಸ್ರ ಚಂಡಿಕಾ ಯಾಗ ಮಹಾ ಪೂರ್ಣಾಹುತಿಗೊಂಡಿತು. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂತರ್ಪಣೆ, ಮಹಾ ಮಂತ್ರಾಕ್ಷತೆ ನಡೆಯಲಿರುವುದು.






