ಮಂಗಲ್ಪಾಡಿ ನಿವಾಸಿ ಡಾ| ಮುನೀರ್‌ಗೆ ಅಮೆರಿಕ ಸರಕಾರದ 22 ಕೋಟಿ ರೂ. ಸಂಶೋಧನಾ ಗ್ರಾಂಟ್

ಕಾಸರಗೋಡು: ಮಂಗಲ್ಪಾಡಿ ನಿವಾಸಿಯಾದ ವಿಜ್ಞಾನಿಯೂ, ಅಸೋಸಿಯೇಟ್ ಪ್ರೊಫೆಸರ್ ಆಫೀಸರ್ ಆಗಿರುವ ಡಾ| ಮುನೀರ್ ಅವರಿಗೆ ಅಮೆರಿಕದ ಫೆಡರಲ್ ಸರಕಾರದ ನೇಶನಲ್ ಇನ್‌ಸ್ಟಿ ಟ್ಯೂಟ್ ಆಫ್ ಹೆಲ್ತ್‌ನ ೨.೭ ದಶಲಕ್ಷ ಡಾಲರ್ (22 ಕೋಟಿ ರೂಪಾಯಿಗಿಂತಲೂ ಹೆಚ್ಚು) ಸಂ ಶೋಧನಾ ಗ್ರಾಂಟ್ ಆಗಿ ಲಭಿಸಿದೆ.

ಆರ್೨೧, ಆರ್‌ಒ೧ ವಿಭಾಗದಲ್ಲಿ ಸಂಶೋಧನಾ ಪ್ರೊಜೆಕ್ಟ್ ಆಗಿರುವ ಮೆದುಳು ಆಘಾತಕ್ಕಿರುವ ಪೆಪ್ ಟೈಡ್ ಥೆರಾಫಿ ಸಂಶೋಧನೆಗಾಗಿ ಧನ ಸಹಾಯ ಲಭಿಸಿದೆ. ನ್ಯೂಜೆರ್ಸಿಯ ಹಾಕಲ್ ಸಾಕ್ ಮರಿಡಿಯನ್ ಹೆಲ್ತ್ತ್ ಜೆಫ್ ಕೆ ಯನಿವರ್ಸಿಟಿ ಮೆಡಿಕಲ್ ಸೆಂಟರ್‌ನ ಸೀನಿಯರ್ ವಿಜ್ಞಾನಿಯೂ, ಅಸೋಸಿಯೇಟ್ ಪ್ರೊಫೆಸರ್ ಆಗಿ ಮುನೀರ್ ಸೇವೆ ಸಲ್ಲಿಸುತ್ತಿದ್ದಾರೆ.

ನಾಲ್ಕು ವರ್ಷದ ಪ್ರಯತ್ನಕ್ಕೆ ಪ್ರತಿಫಲವಾಗಿ  ಈ ಅಂಗೀಕಾರ ಲಭಿಸಿದೆಯೆಂದು ಇದು ತನ್ನ ಸಂಶೋಧನೆಯನ್ನು ಅಭಿವೃದ್ಧಿಪಡಿಸಲು ಹಾಗೂ ಹೊಸ ಸಂಶೋಧಕರನ್ನು ನೇಮಿಸಲು, ತರಬೇತಿ ನೀಡಲು ಸಹಾಯಕವಾಗಲಿದೆಯೆಂದು ಡಾ| ಮುನೀರ್ ತಿಳಿಸಿದ್ದಾರೆ.

ಯೂನಿವರ್ಸಿಟಿ ಆಫ್ ನೆಬ್ರಾಸ್ಕ ಮೆಡಿಕಲ್ ಸೆಂಟರ್ ಹಾಗೂ  ಫಿಲಾಡಲ್ಫಿಯ ಟೆಂಪಲ್ ಯೂನಿವರ್ಸಿಟಿಯಲ್ಲೂ  ಪೋಸ್ಟ್ ಡಾಕ್ಟರಲ್ ಸಂಶೋಧನೆ ನಡೆಸಿದ್ದಾರೆ.

ಕಾಸರಗೋಡು ಸರಕಾರಿ ಕಾಲೇಜಿನಿಂದ ಬಿಎಸ್ಸಿ ಝುವೋಲಜಿ, ಕೊಚ್ಚಿ ವಿಶ್ವ ವಿದ್ಯಾಲಯದಿಂದ ಎಂಎಸ್ಸಿ ಬಯೋಟೆಕ್ನಾಲಜಿ, ಪಿಎಚ್‌ಡಿ, ಮೋಳಿ ಬಯೋಲಜಿ ಎಂಬೀ ಪದವಿಗಳನ್ನು ಡಾ| ಮುನೀರ್ ಪಡೆದುಕೊಂಡಿದ್ದಾರೆ. ಹಲವು ಸಂಶೋಧನಾ ಗ್ರಂಥಗಳಲ್ಲಿ  ಎಡಿಟೋರಿಯಲ್ ಮೆಂಬರ್ ಆಗಿರುವ ಇವರು ೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page