ಮಂಗಲ್ಪಾಡಿ ಪಂ. ಕಚೇರಿಗೆ ನುಗ್ಗಿದ ಕಳ್ಳರು: ತನಿಖೆ ತೀವ್ರ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ಕಚೇರಿಯಿಂದ ನಡೆದ ಕಳವು ಯತ್ನದ ಬಗ್ಗೆ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರ ರಾತ್ರಿ ಪಂಚಾಯತ್ ಕಚೇರಿಗೆ ಕಳ್ಳರು ನುಗ್ಗಿದ್ದಾರೆ. ಪಂಚಾಯತ್‌ನ ಎ.ಇ., ಎನ್.ಆರ್.ಇ.ಜಿ, ಹಸಿರು ಕ್ರಿಯಾ ಸೇನೆಯ ಕೊಠಡಿಗಳ ಬಾಗಿಲಿನ ಬೀಗ ಮುರಿದಿದ್ದು ಆದರೆ ಅಲ್ಲಿಂದ ಯಾವುದೇ ವಸ್ತುಗಳು ಕಳವು ನಡೆದಿಲ್ಲ. ಮುಂಬದಿ ಕಚೇರಿಯ ಬೀಗ ಮುರಿಯಲು ಯತ್ನ ನಡೆದಿದೆ. ಬೀಗ ಮುರಿಯಲು ಬಳಸಿದ ಪಿಕ್ಕಾಸು ಸ್ಥಳದಿಂದ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

You cannot copy contents of this page