ಮಂಜೇಶ್ವರದಲ್ಲಿ ಸಮುದ್ರ ನೀರು ಶುದ್ದೀಕರಣ ಘಟಕ ಬಗ್ಗೆ ಅಧ್ಯಯನ

ಮಂಜೇಶ್ವರ: ಮಂಜೇಶ್ವರವನ್ನು ಕೇಂದ್ರೀಕರಿಸಿ ಸಮುದ್ರ ನೀರು ಶುದ್ದೀಕರಣ ಘಟಕ ಸ್ಥಾಪಿಸುವ ಯೋಜನೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಹೀಗೆ ಈ ಸ್ಥಾವರದಿಂದ ಶುದ್ಧೀಕರಿಸಲಾಗುವ ನೀರನ್ನು ಶುದ್ಧ ಜಲವನ್ನಾಗಿ ಪರಿವರ್ತಿಸಿ ನೀರಿನ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳುವ ಪ್ರಯತ್ನ  ನಡೆಸಲಾಗುತ್ತಿದೆ.

ಈ ಬಗ್ಗೆ ಈಗ ಅಧ್ಯಯನ ಮಾತ್ರವೇ ನಡೆಸಲಾಗುತ್ತಿದೆ. ಆದರೆ ಸಂಸ್ಕರಣ ಘಟಕ ಸ್ಥಾಪಿಸುವ ನಿರ್ದಿಷ್ಟ ಸ್ಥಳವನ್ನು ನಿಗದಿಪಡಿಸಲಾಗಿಲ್ಲ. ಅಧ್ಯಯನಪೂರ್ಣಗೊಂಡ ಬಳಿಕವಷ್ಟೇ ಈ ಯೋಜನೆಗೆ ಅಂತಿಮ ರೂಪು ನೀಡಲಾಗುವುದು ಎಂದು ಜಲಪ್ರಾಧಿಕಾರ ಅಧಿಕಾರಿಗಳು ಹೇಳುತ್ತಿ ದ್ದಾರೆ. ಸಮುದ್ರ ನೀರು ಶುದ್ಧೀಕರಿಸುವ ಘಟಕದ ಹೊರತಾಗಿ ಜಿಲ್ಲೆಯ ಹಲವು ಹೊಳೆಗಳಿಗೂ ಹೊಸ ಅಣೆಕಟ್ಟುಗಳನ್ನು ನಿರ್ಮಿಸಬೇಕು, ಮಾತ್ರವಲ್ಲ ಇತರ ಜಿಲ್ಲೆಗಳಲ್ಲಿ ಇರುವ ಹಾಗೇ  ಜಿಲ್ಲೆಯಲ್ಲೂ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಬೇಕು. ಆ ಮೂಲಕ ಬೇಸಿಗೆ ಕಾಲದಲ್ಲಿ ಜಿಲ್ಲೆಯಲ್ಲಿ ತಲೆದೋರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ಬೇಡಿಕೆಯನ್ನು ಜಲ ಪ್ರಾಧಿಕಾರ ಅಧಿಕಾರಿಗಳು ಮುಂದಿರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page