ಮಂಜೇಶ್ವರದಿಂದ ತಿರುವನಂತಪುರ ತನಕ ಬಜರಂಗದಳ ಶೌರ್ಯ ಜಾಗರಣಾ ರಥ ಯಾತ್ರೆ, ಬೈಕ್ ರ‍್ಯಾಲಿ: ಅ.೧ರಂದು ಮಂಜೇಶ್ವರದಿಂದ ಚಾಲನೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಸ್ಥಾಪನೆಗೊಂಡು ಇದೀಗ ೬೦ನೇ ವರ್ಷದ ಷಷ್ಠಿಪೂರ್ತಿ ಕಾರ್ಯಕ್ರಮದ ಅಂಗವಾಗಿ ಬಜರಂಗದಳದ ನೇತೃತ್ವದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಬೈಕ್ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಸಹಕಾರದೊಂದಿಗೆ ಇದನ್ನು ನಡೆಸಲಾಗು ವುದು. ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯವಾಕ್ಯ ಗಳೊಂದಿಗೆ ಈ ರಥ ಯಾತ್ರೆ ನಡೆಸಲಾಗುವುದು. ಹಿಂದೂ ಸಮಾಜಕ್ಕೆ ಸವಾಲಾಗಿರುವ ಡ್ರಗ್ಸ್ ಮಾಫಿಯಾ, ಭೂ ಮಾಫಿಯಾ, ಲವ್ ಜಿಹಾದ್ ಇತ್ಯಾದಿಗಳು ನಮ್ಮ ಯುವಕ-ಯುವತಿಯರನ್ನು ದಾರಿ ತಪ್ಪಿಸುತ್ತಿದೆ. ಇದರ ಹೊರತಾಗಿ ಕೇರಳವನ್ನು ಉಳಿಸಿ, ಯುವಕರನ್ನು ರಕ್ಷಿಸಿ, ಎಂಬ ಸಂದೇಶವನ್ನು ಒಳಪಡಿಸಿ ಈ ರಥಯಾತ್ರೆ ನಡೆಸಲಾಗುತ್ತಿದೆ ಎಂದು ಈ ಪ್ರಯುಕ್ತ ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋ ಷ್ಠಿಯ ವಿಶ್ವ ಹಿಂದೂ ಪರಿಷತ್‌ನ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ, ಜಿಲ್ಲಾ ಕಾರ್ಯದರ್ಶಿ ಯಾದವ ಕೀರ್ತೇಶ್ವರ, ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಗೋರಕ್ಷಾ ಸಮಿತಿಯ ರವಿಚಂದ್ರ ಎಡನೀರು ಎಂಬವರು ತಿಳಿಸಿದ್ದಾರೆ.

ಶೌರ್ಯ ಜಾಗ್ರತಾ ರಥಯಾತ್ರೆ ಮತ್ತು ಬೈಕ್ ರ‍್ಯಾಲಿ ಅಕ್ಟೋಬರ್ ಒಂದರಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ ಪರಿಸರದಿಂದ ಆರಂಭಗೊಳ್ಳಲಿದೆ. ಅದರ ಮೊದಲು ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆಯೂ ನಡೆಯಲಿದೆ. ೧೦.೩೦ಕ್ಕೆ ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ರವೀಶ ತಂತ್ರಿ ಕುಂಟಾರು ದೀಪ ಪ್ರಜ್ವಲನೆಗೊಳಿಸುವರು. ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ್ ಸೂರ್ಯನಾರಾಯಣ ಜಿ. ಅವರು ದಿಕ್ಸೂಚಿ ಭಾಷಣ ಮಾಡುವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮತ್ತು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನದ ಅಧ್ಯಕ್ಷ ಗಣಪತಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿ.ಹಿಂ.ಪ ಕೇರಳ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರನ್  ಜಿ, ಬಜರಂಗದಳ ಕ್ಷೇತ್ರೀಯ ಸಂಯೋ ಜಕ್ ಜಿಜೇಶ್ ಪತ್ತೇರಿ ಮತ್ತು ಬಜರಂಗದಳದ ಕೇರಳ ಪ್ರಾಂತ್ಯ ಸಂಯೋಜಕ್ ಅನೂಪ್ ಮೊದಲಾ ದವರು ಉಪಸ್ಥಿತರಿರುವರು.

ರಥಯಾತ್ರೆ ಮಂಜೇಶ್ವರದಿಂದ ಸೀತಾಂಗೋಳಿ ದಾರಿಯಾಗಿ ಮಧೂರು ಕ್ಷೇತ್ರಕ್ಕೆ ಬಂದು ಅಲ್ಲಿಂದ ಬಳಿಕ ಕಾಸರಗೋಡು ಕರಂದಕ್ಕಾಡು ನಿಂದ ಚಂದ್ರಗಿರಿ ಜಂಕ್ಷನ್ ಹೊಸದುರ್ಗದತ್ತ ಸಾಗಲಿದೆ. ಇzರೊಂದಿಗೆ ನೂರಾರು ಬೈಕ್‌ಗಳ ರ‍್ಯಾಲಿಯೂ ನಡೆಯಲಿದೆ. ಅಕ್ಟೋಬರ್ ೬ಕ್ಕೆ ತಿರುವನಂತಪುರ ದಲ್ಲಿ ರಥಯಾತ್ರೆ ಅದ್ದೂರಿಯ ಸಮಾರಂಭ ದೊಂದಿಗೆ ಸಮಾಪ್ತಿ ಹೊಂದಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page