ಮಂಜೇಶ್ವರ: ಅನ್ಯರಾಜ್ಯ ಕಾರ್ಮಿಕರ ಮಾಹಿತಿ ಸಂಗ್ರಹ
ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅನ್ಯ ರಾಜ್ಯ ಕಾರ್ಮಿಕರ ಮಾಹಿತಿ ಯನ್ನು ಸಂಗ್ರಹಿಸಲಾಯಿತು. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅದರಲ್ಲೂ ಕರ್ನಾಟಕ ಕೇರಳ ಗಡಿ ಪ್ರದೇಶಗಳಲ್ಲಿ ಅತ್ಯಧಿಕ ಮಂದಿ ಅನ್ಯ ರಾಜ್ಯ ಕಾರ್ಮಿಕರುಗಳು ಕುಟುಂಬ ಸಮೇತರಾಗಿ ಹಾಗೂ ಏಕಾಂಗಿಯಾಗಿ ವಾಸಿಸುತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನ್ಯ ರಾಜ್ಯ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇವರಿಂದ ಮಾಹಿತಿ ಯನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಕುಂಜತ್ತೂರು ಮಾಸ್ಕೋ ಸಭಾಂಗಣದಲ್ಲಿ ಮಂಜೇಶ್ವರ ಎಸ್.ಐ. ಎನ್ ಅನ್ಸಾರ್ ಹಾಗೂ ಜನ ಮೈತ್ರಿ ಪೊಲೀಸ್ ಅಧಿಕಾರಿ ಮಧುರವರ ನೇತೃತ್ವದಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಯಿತು. ಈ ಸಂದರ್ಭ ಸ್ಥಳೀಯ ವಿವಿಧ ರಾಜ ಕೀಯ, ಸಾಮಾಜಿಕ ಸಂಘಟನೆಗಳ ನೇತಾರರು ಹಾಗೂ ಕಾರ್ಯಕರ್ತರು ಸಹಕಾರ ನೀಡಿದರು. ಕುಂಜತ್ತೂರು ಪದವು ಪ್ರದೇಶದಲ್ಲಿ ಅತ್ಯಧಿಕ ಫ್ಲೈವುಡ್ ಕಾರ್ಖಾನೆಗಳು ಕಾರ್ಯಾಚರಿಸುತಿದ್ದು, ಇಲ್ಲಿನ ಬಹುತೇಕ ಕಾರ್ಮಿಕರು ಅನ್ಯ ರಾಜ್ಯದವರಾಗಿದ್ದಾರೆ. ಇಲ್ಲಿ ಕೆಲವೊಂದು ಕಾರ್ಖಾನೆಗಳು ಕರ್ನಾಟಕದ ಸ್ಥಳದಲ್ಲಿ ಇದ್ದರೆ ಕಾರ್ಮಿಕರು ತಂಗುವ ವಸತಿ ಗೃಹ ಕೇರಳದ ಪ್ರದೇಶವಾಗಿದೆ. ಈ ಪ್ರದೇಶ ದಲ್ಲಿ ರಾತ್ರಿ ಸಮಯಗಳಲ್ಲಿ ಊರವರು ಹೋಗಲು ಹೆದರುತ್ತಿದ್ದಾರೆ. ಇಲ್ಲಿ ಅನ್ಯರಾಜ್ಯ ಕಾರ್ಮಿಕರಿಂದ ಮಾದಕ ವಸ್ತುಗಳ ಹಾಗೂ ಮಧ್ಯ ದಂಧೆ ಕೂಡಾ ನಡೆಯುತ್ತಿರುವ ಬಗ್ಗೆ ದೂರುಗಳು ಇದೆ.