ಮಂಜೇಶ್ವರ ಉಪಜಿಲ್ಲಾ ಕಲೋತ್ಸವಕ್ಕೆ ಇಂದು ತೆರೆ ಧರ್ಮತ್ತಡ್ಕಕ್ಕೆ ಹರಿದುಬಂದ ಜನಸಾಗರ
ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ಮಂಜೇಶ್ವರ ಉಪಜಿಲ್ಲಾ ೬೨ನೇ ಶಾಲಾ ಕಲೋತ್ಸವ ನಾಲ್ಕು ದಿನ ನಡೆಯುತ್ತಿದ್ದು, ಜನಸಾಗರ ಹರಿದುಬರುತ್ತಿದೆ. ಅಚ್ಚುಕಟ್ಟಾದ ವ್ಯವಸ್ತೆಯಿಂದ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಅಧ್ಯಾಪಕವೃಂದ, ರಕ್ಷಕರು, ವಿವಿಧ ಸಂಘ-ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಹಾಗೂ ಊರವರ ಸಹಕಾರ ಯಶಸ್ವಿಗೆ ಕಾರಣವಾಗಿದೆಯೆಂದು ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ತಿಳಿಸಿದ್ದಾರೆ.
ಉಪಜಿಲ್ಲೆಯ ೧೧೨ ಶಾಲೆಗಳ ೪೫೮೪ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಿನ್ನೆ ಯಕ್ಷಗಾನ, ನಾಟಕ, ನೃತ್ಯಗಳು ನಡೆದಿದೆ. ಇಂದು ಭರತನಾಟ್ಯ ಸಹಿತ ವಿವಿಧ ನೃತ್ಯಗಳು ನಡೆದು ಸಂಜೆ ೪ಕ್ಕೆ ಸಮಾರೋಪಗೊಳ್ಳಲಿದೆ. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್ ಸಮಾರೋಪದ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ಮೋ ಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ವಿವಿಧ ಪಂಚಾಯತ್ಗಳ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ವಲಯದ ಗಣ್ಯರಾದ ಜಯಂತಿ.ಕೆ, ಜಯಂತಿ, ಪಾಲಾಕ್ಷ ರೈ, ಅನಿತ.ಎಂ, ಕೇಶವ ಎಸ್ಆರ್. ಜನಾರ್ದನ ಪೂಜಾರಿ ಕೆ, ಅನಿತಶ್ರೀ, ಪ್ರೇಮ ಎಸ್. ರಾವ್. ಅಶೋಕ್ ಭಂಡಾರಿ, ಗೀತಾ ಎಂ, ದಿನೇಶ್ ವಿ, ನಾರಾಯಣ ದೇಲಂಪಾಡಿ, ವಿನೀಶ್ ವಿ.ಆರ್, ಡಾ. ಜಯಪ್ರಕಾಶ್ ನಾರಾಯಣ ಟಿ, ಮಹಾಬಲೇಶ್ವರ ಭಟ್ ಇ.ಎಸ್., ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಕೆ. ಶೆಟ್ಟಿ, ವಿಜಯ ಕುಮಾರ್ ಪಿ, ಡಾ. ವಿನೋದ್ ಕುಮಾರ್, ಶಾಮ್ ಭಟ್ ಚೇವಾರು, ಶಂಕರ ರಾವ್ ಕೆ, ಅಶೋಕ ಎನ್, ಜಯಲಕ್ಷ್ಮಿ, ವಿಜಯಶ್ರೀ ಬಿ ಉಪಸ್ಥಿತರಿದ್ದರು.