ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಅ.೩೦, ೩೧ರಂದು: ಆಹ್ವಾನ ಪತ್ರಿಕೆ ಬಿಡುಗಡೆ

ಮಂಜೇಶ್ವರ : ಅಕ್ಟೋಬರ್ 30 ಹಾಗೂ 31 ರಂದು ನಡೆಯಲಿರುವ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವಿಜ್ಞಾನೆÆÃತ್ಸವದ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಸಂಬA ಧಪಟ್ಟವರು ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಂಜೇಶ್ವರ ಉಪ ಜಿಲ್ಲಾ ಮಟ್ಟದ 112 ಶಾಲೆಗಳ ಸುಮಾರು 3000 ದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಲಿ ರುವುದಾಗಿ ಮುಖ್ಯೋಪಧ್ಯಾಯ ಬಾಲಕೃಷ್ಣ ಜಿ. ಪ್ರಾಂಶುಪಾಲ ಶಿಶುಪಾಲನ್ ತಿಳಿಸಿದರು. ವಿಜ್ಞಾನ ಮೇಳವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ವಿಜ್ಞಾನ ಮೇಳದ ದ್ವಿತೀಯ ದಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಉದ್ಘಾಟಿಸುವರು. ಮೊದಲ ದಿನ ವಿಜ್ಞಾನ, ಗಣಿತ ಹಾಗೂ ಐಟಿ ವಿಭಾಗದ ವಿಜ್ಞಾನ ಮೇಳ ನಡೆಯಲಿದೆ. ಎರಡನೇ ದಿನ ಸಮಾಜ ವಿಜ್ಞಾನ ಮತ್ತು ವೃತ್ತಿ ಪರಿಚಯದ ಮೇಳ ನಡೆಯಲಿದೆ. ಜಿ.ವಿ.ಎಚ್.ಎಸ್.ಎಸ್. ಕುಂಜತ್ತೂರು ಶಾಲೆಯಲ್ಲಿ ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನÉÆÃತ್ಸವದ ಆಹ್ವಾನ ಪತ್ರಿಕೆ ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಬಿಡುಗಡೆ ಗೊಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಖಾದರ್ ಹನೀಫ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ. ಎಸ್.ಎಚ್. ಉಪ ಜಿಲ್ಲಾ ಮುಖ್ಯ ಶಿಕ್ಷಕರ ವೇದಿಕೆ ಕಾರ್ಯದರ್ಶಿ ಶ್ಯಾಮಭಟ್, ಶಿಕ್ಷಕಿಯಾರಾದ ಅಮಿತಾ, ಅನಿತಾ, ಸರಿತಾ, ದಿವಾಕರ ಬಲ್ಲಾಳ್ ಉಪ್ಛನಿತರಿದ್ದರು.

Leave a Reply

Your email address will not be published. Required fields are marked *

You cannot copy content of this page