ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮ, ವಿಜ್ಞಾಪನಾ ಪತ್ರ ಬಿಡುಗಡೆ ೫ರಂದು

ಮಂಜೇಶ್ವರ: ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಪುನರ್ ನಿರ್ಮಾಣ ಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಈ ತಿಂಗಳ ೫ರಂದು ನಡೆಯಲಿದೆ. ಬೆಳಿಗ್ಗೆ ೮.೩೦ಕ್ಕೆ ೧೦೮ ಕಾಯಿಗಳ ಮಹಾಗಣಯಾಗ, ೧೧ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ್ ಸ್ವಾಮೀಜಿ, ಕೊಂಡೆ ವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿ, ವಿಜಯ ಗುರೂಜಿ, ಕೃಷ್ಣ ಕಾರ್ನವರ್, ವಿಶ್ವನಾಥ ಕುದುರು ಉಪಸ್ಥಿತರಿರುವರು.  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮ ನಾಭ ಕಡಪ್ಪುರ ಅಧ್ಯಕ್ಷತೆ ವಹಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸುವರು. ನಿಧಿ ಸಂಚಯನ ಕಾರ್ಯಕ್ರಮವನ್ನು  ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೃಷ್ಣ ಎನ್. ಉಚ್ಚಿಲ್, ಮಾಜಿ ಶಾಸಕ  ಪ್ರಮೋದ್ ಮಧ್ವರಾಜ್ ಸಭೆ ಉದ್ಘಾಟಿಸುವರು. ಕ್ಷೇತ್ರದ ಪದಾಧಿಕಾರಿಗಳ ಸಹಿತ ವಿವಿಧ ವಲಯದ ಹಲವು ಗಣ್ಯರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page