ಮಂಜೇಶ್ವರ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮ: ಮಹಿಳಾ ವಿಚಾರಗೋಷ್ಠಿ

ಉಪ್ಪಳ: ಮಂಜೇಶ್ವರ ತಾಲೂಕಿ ನಲ್ಲಿ ಜ್ಞಾನವಿಕಾಸ ಕಾರ್ಯ ಕ್ರಮದ ಅಂಗವಾಗಿ ಮಹಿಳಾ ವಿಚಾರಗೋಷ್ಠಿ ಜರಗಿತು. ಕುಂಬ್ಳೆ ವಲಯದ ಒಕ್ಕೂಟಗಳ ವಲಯಾಧ್ಯಕ್ಷೆ ಜಯಂತಿ ಗೋಪಾಲಕೃಷ್ಣ ಗಟ್ಟಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕುಂಬ್ಳೆ ವಾರ್ಡ್ ಸದಸೆÀ್ಯ ಸುಲೋಚನಾ .ಪಿ ಉದ್ಘಾಟಿಸಿ ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಉದ್ಯಮಿ ನಾರಾ ಯಣ ಪ್ರಭು, ವಕೀಲ ಉದಯ ಕುಮಾರ್ ಗಟ್ಟಿ ಭಾಗವಹಿಸಿದ್ದರು. ಜನಜಾಗÀÈತಿ ವೇದಿಕೆ ಸ್ಥಾಪಕಾಧ್ಯಕ್ಷ ಗೋಪಾಲ್ ಶೆಟ್ಟಿ ಅರಿಬೈಲ್, ಜನಜಾಗ್ರತಿ ಕುಂಬ್ಳೆ ವಲಯಾಧ್ಯಕ್ಷ ಮಹೇಶ್ ಪುಣಿಯೂರು, ಸದಸೆÀ್ಯ ವಿದ್ಯಾ ಪೈ ಶುಭ ಕೋರಿದರು. ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರ ಮದಲ್ಲಿ ಕುಟುಂಬದಲ್ಲಿ ಮಹಿಳೆಯರ ಪಾತ್ರ ಎಂಬ ವಿಚಾರದ ಬಗ್ಗೆ ಸಾಮಾ ಜಿಕ ಕಾರ್ಯಕರ್ತೆ ಆಯಿಷಾ ಎ ಪೆರ್ಲ ಮಾಹಿತಿ ನೀಡಿದರು. ಯೋಜನಾದಿs ಕಾರಿಗಳು, ಜ್ಞಾನವಿಕಾಸ ಸಮನ್ವಯಾ ದಿsಕಾರಿüಗಳು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ಹಾಗೂ ನವಜೀವನ ಸಮಿತಿಯ ಪದಾಧಿಕಾರಿ ಗಳು ಭಾಗವಹಿಸಿದರು. ತಾಲೂಕಿನ 25 ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿ, ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದರು. ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರದ ಸದಸ್ಯರಿಗೆ ಬಹುಮಾನಗಳನ್ನು ವಿತರಿಸಿ ಗುರುತಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page