ಮಂಜೇಶ್ವರ ಪಂಚಾಯತ್ ಆರೋಗ್ಯ ಇಲಾಖೆ ಸಭೆ

ಮಂಜೇಶ್ವರ : ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಮುಂಜಾಗ್ರತ ಕ್ರಮ, ಆಶಾ ಕಾರ್ಯಕರ್ತರ ಅವಲೋಕನ ಸಭೆ ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಜರಗಿತು. ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ ಅಧ್ಯಕ್ಷತೆ
ವಹಿಸಿದ್ದರು.
ಡಾ| ಪ್ರಭಾಕರ್ ಶೆಟ್ಟಿ ರೋಗಗಳ ಬಗ್ಗೆ ಮಾಹಿತಿ ನೀಡಿದರು, ಆಶಾ ಕಾರ್ಯಕರ್ತರ ಕರ್ತವ್ಯವನ್ನು ಅಭಿನಂದಿಸಲಾಯಿತು. ಮಂಜೇಶ್ವರ ಅರೋಗ್ಯ ಇಲಾಖೆ ಮತ್ತು ಪಂಚಾಯತ್ ಜಂಟಿ ಯಾಗಿ ಸಾಂಕ್ರಾಮಿಕ ರೋಗ ತಡೆಯುವಿಕೆಗೆ ಮತ್ತು ಮಾಹಿತಿ ನೀಡಲು ತೀರ್ಮಾನಿಸಲಾಯಿತು. ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ತೀರ್ಮಾನಿಸಲಾಯಿತು. ಆರೋಗ್ಯ ದೃಷ್ಟಿಯಿಂದ ಆಹಾರ ಸೇವನೆ ಕೇಂದ್ರಗಳಲ್ಲಿ, ಹೋಟೆಲ್, ಮದುವೆ ಸಭಾಂಗಣಗಳಲ್ಲಿ ಆರೋಗ್ಯ ಇಲಾಖೆ, ಹಸಿರು ಕ್ರಿಯÁಸೇನೆ, ಆಶಾ ವರ್ಕರ್, ಪಂಚಾಯತ್ ನೇತೃತ್ವದಲ್ಲಿ ಪರಿಶೋಧನೆ, ದಾಳಿ ನಡೆಸಲು ತೀರ್ಮಾನಿಸಲಾಯಿತು. ತ್ಯಾಜ್ಯ ಎಸೆಯುವುದು ಕಂಡರೆ ಅಂತವರ ಮಾಹಿತಿ ನೀಡಲು ಮುಂದೆ ಬರಲು ಸಾರ್ವಜನಿಕರಲ್ಲಿ ವಿನಂತಿಸಲಾಯಿತು. ಪಂಚಾಯತ್ ಉಪಾಧ್ಯಕ್ಷ, ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯರಾದ ಆದರ್ಶ ಬಿ ಎಂ, ರೇಖಾ ಕೀರ್ತಿಶ್ವರ, ಲಕ್ಶ್ಮಣ ಬಿ ಎಂ, ಅರೋಗ್ಯ ಇಲಾಖೆ ಯ ಅಖಿಲ್, ಜ್ಯೋತಿ, ಸಪ್ನಾ ಸಿಸ್ಟರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page