ಮಂಜೇಶ್ವರ ರೈಲ್ವೇ ನಿಲ್ದಾಣ ಬಗ್ಗೆ ಸಂಸದ ತೋರಿಸುವ  ಅವಗಣನೆ ಕೊನೆಗೊಳಿಸಬೇಕು-ಬಿ.ವಿ. ರಾಜನ್

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ಬಗ್ಗೆ ಸಂಸದ ರಾಜ್‌ಮೋ ಹನ್ ಉಣ್ಣಿತ್ತಾನ್ ತೋರಿಸುವ  ಅವಗಣನೆ ಕೊನೆಗೊಳಿಸಬೇಕೆಂದು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಬಿ.ವಿ. ರಾಜನ್ ತಿಳಿಸಿದ್ದಾರೆ.  ಸಂಸದರಾಗಿ ನಾಲ್ಕೂವರೆ ವರ್ಷಗಳಲ್ಲಿ  ಮಂಜೇಶ್ವರ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ರಾಜ್‌ಮೋಹನ್ ಉಣ್ಣಿತ್ತಾನ್‌ರನ್ನು ರಾಜಕೀಯ ವ್ಯತ್ಯಾಸವಿಲ್ಲದೆ ಜನರು ತಿರಸ್ಕರಿಸುವರೆಂದೂ  ಬಿ.ವಿ. ರಾಜನ್ ತಿಳಿಸಿದ್ದಾರೆ. ಇದುವರೆಗೆ ಒಂದು ಬಾರಿಯೂ ಪಾರ್ಲಿಮೆಂಟ್‌ನಲ್ಲಿ ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಅವಗಣಿಸುವುದರ ವಿರುದ್ಧ ರಾಜ್‌ಮೋಹನ್ ಉಣ್ಣಿತ್ತಾನ್ ಧ್ವನಿಯೆತ್ತಲಿಲ್ಲ. ಅಭಿವೃದ್ಧಿಗಾಗಿ ನೀಡಿದ ಮನವಿಗೂ ಉತ್ತರಿಸಲಿಲ್ಲ. ಲಾಲೂ ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದಾಗ ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಆದರ್ಶ ನಿಲ್ದಾಣವಾಗಿ ಘೋಷಿಸಿದ್ದು, ಆದರೆ ಅದನ್ನು  ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಿರಾಕರಿಸುತ್ತಿದ್ದಾ ರೆಂದೂ ಬಿ.ವಿ. ರಾಜನ್ ತಿಳಿಸಿದ್ದಾರೆ. ಈ ಹಿಂದೆ ಎಕೆಜಿ, ಕಡನ್ನಪ್ಪಳ್ಳಿ ರಾಮಚಂದ್ರನ್, ರಾಮಣ್ಣ ರೈ, ಐ. ರಾಮ ರೈ, ಟಿ. ಗೋವಿಂದನ್, ಪಿ. ಕರುಣಕರನ್ ಮೊದಲಾದವರು ಜನರೊಂದಿಗೆ ತೋರಿಸುತ್ತಿದ್ದ ಒಕ್ಕೂಟವನ್ನು ಉಣ್ಣಿತ್ತಾನ್  ಕೇಳಿ ತಿಳಿದುಕೊಳ್ಳಬೇಕಾಗಿದೆಯೆಂದೂ ಬಿ.ವಿ. ರಾಜನ್ ಆಗ್ರಹಪಟ್ಟಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page