ಮಟ್ಕಾ ದಂಧೆ: ವಿವಿಧ ಸ್ಥಳಗಳಿಂದ ೫ ಮಂದಿ ಸೆರೆ
ಉಪ್ಪಳ: ಉಪ್ಪಳ, ಹೊಸಂಗಡಿ ಪರಿಸರಗಳಲ್ಲಿ ವ್ಯಾಪಕ ರೀತಿಯಲ್ಲಿ ಮಟ್ಕಾ ದಂಧೆ ನಡೆಯುತ್ತಿರುವುದು ಪೊಲೀಸರಿಗೂ, ಸ್ಥಳೀಯರಿಗೂ ತಲೆನೋವಾಗುತ್ತಿದೆ. ಕಳೆದ ಎರಡು ದಿನಗಳಲ್ಲಾಗಿ ೫ ಮಂದಿಯನ್ನು ವಿವಿಧ ಕಡೆಗಳಿಂದ ಮಟ್ಕಾ ದಂಧೆ ಪ್ರಕರಣದಲ್ಲಿ ಸೆರೆಹಿಡಿಯಲಾಗಿದೆ.
ನಿನ್ನೆ ಸಂಜೆ ನಯಾಬಜಾ ರ್‌ನಿಂದ ಉಪ್ಪಳ ಅಂಬೇಡ್ಕರ್ ಕ್ಲಬ್ ಪರಿಸರ ನಿವಾಸಿ ಸಂತೋಷ್ ಕುಮಾರ್ (೩೨)ನನ್ನು ಸೆರೆಹಿಡಿಯ ಲಾಗಿದೆ. ಈತನಿಂದ ೩೧೦ ರೂ. ವಶಪಡಿಸಲಾಗಿದೆ. ಉಪ್ಪಳ ಹೋಟೆ ಲ್ ಪರಿಸರದಿಂದ ಶಾಂತಿಗುರಿ ನಿವಾಸಿ ಎಂ.ಎಂ. ಮುಹಮ್ಮದ್ ೪೩)ನನ್ನು ಸೆರೆಹಿಡಿದು ೩೧೦ ರೂ. ವಶಪಡಿಸಲಾಗಿದೆ. ಕೋಟೆಕ್ಕಾರ್ ಕೊಯಿಪ್ಪಾಡಿ ನಿವಾಸಿ ಗಣೇಶ್ (೩೭)ನನ್ನು ನಯಾ ಬಜಾರ್‌ನಿಂದ ಸೆರೆಹಿಡಿಯಲಾಗಿದ್ದು, ಈತನಿಂದ ೩೧೫ರೂ. ವಶಪಡಿಸಲಾಗಿದೆ. ಮೂ ವರನ್ನು ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು ಸೆರೆಹಿಡಿದಿದ್ದಾರೆ.
ಮೊನ್ನೆ ಸಂಜೆ ಕಡಂಬಾರ್ ನಿವಾಸಿ ಇಬ್ರಾಹಿಂ (೫೦)ನನ್ನು ಹೊಸಂಗಡಿ ಗೇಟ್ ಬಳಿಯಿಂದ ಬಂಧಿಸಲಾಗಿದೆ. ಮಿತ್ತಕನಿಲ ನಿವಾಸಿ ರವೀಶ್ ಕುಮಾರ್ (೪೧)ನನ್ನು ಕಡಂಬಾರ್‌ನಿಂದ ಬಂಧಿಸಲಾಗಿದ್ದು, ಇವರಿಬ್ಬರಿಂದ ಒಟ್ಟು ೧೦೧೦ ರೂ. ವಶಪಡಿಸಲಾಗಿದೆ. ಎಸ್‌ಐ ನಿಖಿಲ್ ಇವರಿಬ್ಬರನ್ನು ಬಂಧಿಸಿದ್ದಾರೆ.