ಮಣವಾಟಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವ ಸಂಭ್ರಮ

ಮಂಜೇಶ್ವರ: ಗಡಿನಾಡಿನ ಕನ್ನಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಕೋಳಿಯೂರು ಗ್ರಾಮದ ಧರ್ಮನಗರದಲ್ಲಿ ಕಳೆದ ಮೂವತ್ತು ವರ್ಷಗಳ ಹಿಂದೆ ಶಿಕ್ಷಣದಲ್ಲಿ ಬಹಳ ಹಿಂದುಳಿದ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಬೇಕೆಂಬ ಮಹದಾಸೆಯಿಂದ ಪೊಯತ್ತಬೈಲ್ ಜಮಾಯತ್‌ನ ಮೂಲಕ ಅಂದಿನ ಆಡಳಿತ ಕಮಿಟಿಯ ಮುಂದೆ ಡಾ.ಇಬ್ರಾಹಿಂ ಹಾಜಿ ಕಲ್ಲೂರುರವರು ಶಾಲೆಯ ಪ್ರಸ್ತಾವನೆ ಮುಂದಿಟಿದ್ದರು.
ಆದರೆ ಆ ಕಾಲದಲ್ಲಿ ಹಣದ ಕೊರತೆ ಬಹಳಷ್ಟು ಇತ್ತು. 1998-99ರಲ್ಲಿ ಇಬ್ರಾಹಿಂ ಹಾಜಿ ಜಮಾಯತ್‌ನ ಉಪಾಧ್ಯಕ್ಷರಾಗಿದ್ದಾಗ ಅಂದಿನ ಅಧ್ಯಕ್ಷರಾಗಿದ್ದ ಜನಾಬ್ ಓ. ಅಹಮದ್ ಕುಂಞಯವರ ಜೊತೆ ಮಾತುಕತೆ ನಡೆಸಿದ್ದರು. 1999-2000ರಲ್ಲಿ 23 ಮಕ್ಕಳು ಹಾಗೂ ಒಂದು ಶಿಕ್ಷಕಿಯ ಮೂಲಕ ಎಲï‌ಕೆಜಿ ಶಾಲೆಯನ್ನು ಪ್ರಾರಂಭಿಸಲಾಯಿತು. ಮೂರು ವರ್ಷದ ನಂತರ ದುಬೈನಲ್ಲಿ ರುವ ಅಬ್ದುಲ್ ರೆಹಮಾನ್ ಹಾಜಿ ಕಿನ್ನಜೆ ಅವರÀÄ ಕೊಲ್ಲಿ ಅದಿsಕಾರಿಗಳ ಸಹಕಾರದಿಂದ ಮಸೀದಿ, ಮದ್ರಸ ಮತ್ತು ಶಾಲೆಗೆ ಹಣಕಾಸು ಕೊಡಿಸುವಲ್ಲಿ ಯಶಸ್ವಿಯಾದರು. ಜತೆಗೆ ಜಮಾಯತ್‌ನ ಸರ್ವರೂ ಕೈಜೋಡಿಸಿದರು. ಈ ಹಣದಿಂದ ಸ್ವಂತ ಕಟ್ಟಡ ಹಾಗೂ ಇನ್ನಿತರ ಸೌಕರ್ಯವನ್ನು ಕಲ್ಪಿಸಲಾಯಿತು. ಈರೀತಿ ಶಾಲೆಯು ಎಲï‌ಕೆಜಿ ಯಿಂದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನವರೆಗೂ ಶಿಕ್ಷಣ ನೀಡಲಾಗುತ್ತಿದ್ದು ಈ ಶಾಲೆ ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಇದೀಗ ಈ ಶಾಲೆಯಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಶಾಲೆಯ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶಾಲೆಯ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಈ ವೇಳೆ ಮಾಜಿ ಮತ್ತು ಹಾಲಿ ಜಮಾಯತ್‌ನ ಆಡಳಿತ ಕಮಿಟಿ, ಶಾಲೆಯ ಮಾಜಿ ಮತ್ತು ಹಾಲಿ ಆಡಳಿತ ಕಮಿಟಿಯವರಿಗೆ ಶಾಲಾ ಸಂಸ್ಥಾಪಕ ಅಧ್ಯಕ್ಷ ಡಾ.ಇಬ್ರಾಹಿಂ ಹಾಜಿ ಕಲ್ಲೂರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page