ಮತದಾನಕ್ಕಿನ್ನು ಎರಡೇ ದಿನ: ಕಾಸರಗೋಡಿನ ಮನಸ್ಸು ಯಾರ ಜೊತೆ?


ಕಾಸರಗೋಡು: ಲೋಕಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಗಂಟೆಗಳು ಮಾತ್ರವೇ ಬಾಕಿಯಿದ್ದು, ಒಕ್ಕೂಟಗಳ ಜಯ-ಪರಾಜಯಗಳಲ್ಲಿ ನಿರ್ಣಾಯಕವಾಗು ವುದು ನಾಲ್ಕು ವಿಧಾನಸಭಾ ಕ್ಷೇತ್ರಗಳ ಓಟಿಂಗ್ ನೆಲೆಯಾಗಿದೆ. ಕಾಸರಗೋಡು, ಮಂಜೇಶ್ವರ ಮಂಡಲಗಳಲ್ಲಿ ಗಳಿಸುವ ಲೀಡನ್ನು ಆಶ್ರಯಿಸಿ ಯುಡಿಎಫ್ನ ಜಯ ಇರಲಿದೆ. ಇದೇ ವೇಳೆ ತಮ್ಮ ಭದ್ರಕೋಟೆಗಳಾದ ಪಯ್ಯನ್ನೂರು, ಕಲ್ಯಾಶ್ಶೇರಿ ಮಂಡಲಗಳಲ್ಲಿ ಗಳಿಸುವ ಲೀಡ್ ಎಡರಂಗಕ್ಕೆ ಪ್ರದಾನವಾಗಿದೆ. 2019ರ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ 35,421, ಕಾಸರಗೋಡಿನಲ್ಲಿ 41,223 ಸೇರಿ ಮಂಡಲಗಳಿAದ ಗಳಿಸಿದ 76,644 ಮತಗಳ ಗಳಿಕೆಯಾಗಿದೆ ರಾಜ್ಮೋಹನ್ ಉಣ್ಣಿತ್ತಾನ್ ರನ್ನು ಪ್ರಥಮ ಸ್ಥಾನಕ್ಕೆ ತಂದಿರುವುದು. ಉದುಮದಿಂದ 8937 ಮತದ ಲೀಡ್ ಕಳೆದ ಬಾರಿ ಲಭಿಸಿದ್ದರೂ ಎರಡು ಒಕ್ಕೂಟಗಳಿಗೆ ಸಮಾನ ಮತ ಲಭಿಸುವ ಸ್ಥಳವಾಗಿದೆ ಇದು.
ಪಯ್ಯನ್ನೂರು, ಕಲ್ಯಾಶ್ಶೇರಿ ಮಂಡಲಗಳಿAದ ನಿರೀಕ್ಷಿತ ಮತಗಳು ಲಭಿಸದಿರುವುದೇ ಕಳೆದ ಬಾರಿ ಎಡರಂಗದ ಕೆ.ಪಿ. ಸತೀಶ್ಚಂದ್ರನ್ರ ಸೋಲಿಗೆ ಕಾರಣವಾಗಿರುವುದು. ಪಯ್ಯನ್ನೂರಿನಿಂದ 26131, ಕಲ್ಯಾಶ್ಶೇರಿಯಿಂದ 13694 ಮತಗಳನ್ನು ಎಡರಂಗ ಲೀಡ್ ಆಗಿ ಗಳಿಸಿತ್ತು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಈ ಎರಡು ಮಂಡಲಗಳಿAದ ಮಾತ್ರ ಎಡರಂಗಕ್ಕೆ 94173 ಮತಗಳ ಲೀಡ್ ಇದೆ. ಕಾಞಂಗಾಡ್, ತೃಕ್ಕರಿಪುರ ಮಂಡಲಗಳು ಎಡರಂಗದೊAದಿಗೆ ನಿಲ್ಲುವ ಕ್ಷೇತ್ರಗಳಾಗಿವೆ.
ಮಂಜೇಶ್ವರ, ಕಾಸರಗೋಡು ಮಂಡಲ ಗಳಲ್ಲಿ ಗರಿಷ್ಠ ಲೀಡ್ ಗಳಿಸಿ ಇತರ ಮಂಡಲ ಗಳಲ್ಲಿ ಎಡರಂಗದ ಮತಗಳನ್ನು ನಿಯಂತ್ರಿಸಿದರೆ ಜಯವನ್ನು ಪುನರಾವರ್ತಿಸಲು ಸಾಧ್ಯವಿದೆ ಎಂದು ಯುಡಿಎಫ್ ಲೆಕ್ಕ ಹಾಕಿದೆ. ಇದೇ ವೇಳೆ ಮಂಜೇಶ್ವರ, ಕಾಸರಗೋಡು ಮಂಡಲಗಳ ಅಲ್ಪಸಂಖ್ಯಾತ ಮತಗಳಲ್ಲಿ ಸಿಎಎ ಪ್ರಚಾರದಿಂದ ಸೋರಿಕೆ ಉಂಟುಮಾಡಲು ಸಾಧ್ಯವಾಗಿದೆ ಎಂದು ಎಡರಂಗ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಭದ್ರಕೋಟೆಗಳ ಮತಗಳನ್ನು ಖಚಿತಪಡಿಸಲು ಸಾಧ್ಯವಾದರೆ ಮಂಡಲವನ್ನು ಮತ್ತೆ ಹಿಡಿಯಲು ಸಾಧ್ಯವೆಂದು ಎಡರಂಗ ತಿಳಿದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಞಂಗಾಡ್ 2221, ತೃಕ್ಕರಿಪುರ 1899 ಮತಗಳು ಮಾತ್ರವೇ ಕಳೆದ ಬಾರಿ ಎಡರಂಗಕ್ಕೆ ನೀಡಿರುವುದು.
ಮಂಜೇಶ್ವರ, ಕಾಸರಗೋಡು ಮಂಡಲಗಳಲ್ಲಿ ದ್ವಿತೀಯ ಸ್ಥಾನದಲ್ಲಿರುವ ಬಿಜೆಪಿಯ ಮತ ಗಳಿಕೆ ಕೂಡಾ ಜಯ-ಪರಾಜಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಕಾಸರಗೋಡು ಲೋಕಸಭಾ ಕ್ಷೇತ್ರ ರೂಪುಗೊಂಡ ಬಳಿಕ ನಡೆದ 16 ಚುನಾವಣೆಗಳಲ್ಲಿ 12 ಬಾರಿ ಎಡರಂಗ ಹಾಗೂ ನಾಲ್ಕು ಬಾರಿ ಯುಡಿಎಫ್ ಜಯಗಳಿಸಿದೆ. ಬಿಜೆಪಿ ಪ್ರತೀ ಬಾರಿಯೂ ತನ್ನ ಮತಗಳಿಕೆಯನ್ನು ಹೆಚ್ಚಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page