ಮತದಾರರ ಪಟ್ಟಿ ನವೀಕರಣೆ: ನಾಳೆಯಿಂದ ಅರ್ಜಿ ಸಲ್ಲಿಸಲು ಅವಕಾಶ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ವಾರ್ಡ್‌ಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಯಾದಿಯನ್ನು ನವೀಕರಿಸಲಾಗುವುದು. ಕರಡು ಯಾದಿಯನ್ನು ನಾಳೆ ಹಾಗೂ ಅಂತಿಮ ಯಾದಿಯನ್ನು ಪ್ರಕಟಿಸಲಾಗುವುದು. ರಾಜ್ಯದ 31 ಸ್ಥಳೀಯಾಡಳಿತ ವಾರ್ಡ್‌ಗಳ ಮತದಾರ ಯಾದಿಯನ್ನು ರಾಜ್ಯ ಚುನಾವಣೆ ಆಯೋಗ ನವೀಕರಿಸಲಿದೆ. ಚುನಾಯಿತ ಸದಸ್ಯರ ಸಾವು, ರಾಜೀನಾಮೆ, ಅನರ್ಹತೆ   ಮೊದಲಾದ ಆಕಸ್ಮಿಕವಾಗಿ ತೆರವಾಗುವ ಸ್ಥಾನ ಗಳಿಗೆ ಉಪ ಚುನಾವಣೆ ನಡೆಯುವುದರಿಂದಾಗಿ ಯಾದಿಯನ್ನು ನವೀಕರಿಸಲಾಗುತ್ತಿದೆ.

ಕರಡು ಯಾದಿಯಲ್ಲಿ ಹೆಸರು ಸೇರದವರಿಗೆ ನಾಳೆಯಿಂದ 18ರವರೆಗೆ ಅರ್ಜಿ ಸಲ್ಲಿಸಬಹುದು. 2025 ಜನವರಿ 1ರಂದು ಅಥವಾ ಅದಕ್ಕಿಂತ ಮುಂಚಿತ 18 ವರ್ಷ ಪೂರ್ತಿಯಾದವರಿಗೆ ಹೆಸರು ಸೇರಿಸಲು ಅಹತೆ ಇದೆ. ಇದಕ್ಕಾಗಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಆಗಿ ಅರ್ಜಿ ಸಲ್ಲಿಸಬೇಕಾಗಿದೆ. ತಿದ್ದುಪಡಿ ಮಾಡಲು, ಸ್ಥಳಾಂತರ ಮಾಡಲು ಕೂಡಾ ನಾಳೆಯಿಂದ ಅರ್ಜಿ ಸಲ್ಲಿಸಬಹುದು. ಹೆಸರು ತೆರವುಗೊಳಿಸಲು ಆನ್‌ಲೈನ್ ಆಗಿ ನೋಂದಾಯಿಸಿ ಅದರ ಪ್ರಿಂಟೌಟ್ ತೆಗೆದು ನೇರವಾಗಿ ಚುನಾವಣೆ ರಿಜಿಸ್ಟ್ರೇಶನ್ ಅಧಿಕಾರಿಗೆ ನೀಡಬೇಕು. ಆಯಾ ಸಂಸ್ಥೆಗಳ ಕಾರ್ಯದರ್ಶಿಗಳು ಚುನಾವಣೆ ನೋಂದಾವಣೆ ಅಧಿಕಾರಿಗಳಾಗಿರುತ್ತಾರೆ.

ಕಾಸರಗೋಡು ಜಿಲ್ಲೆಯಲ್ಲಿ ಮಡಿಕೈ ಪಂಚಾಯತ್ ಎಂಟನೇ ವಾರ್ಡ್ ಕೋಟಿಕುನ್ನು, ಕೋಡೋಂ ಬೇಳೂರು ಪಂ. 5ನೇ ವಾರ್ಡ್ ಆಯರೋಟ್, ಕಯ್ಯೂರು ಚೀಮೇನಿ ಪಂಚಾಯತ್‌ನ ೭ನೇ ವಾರ್ಡ್ ಪಳ್ಳಿಪ್ಪಾರ ಎಂಬೆಡೆಗಳಲ್ಲಿ ಉಪ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page