ಮತ್ತೆ ಕಳ್ಳರ ಹಾವಳಿ: ಭಜನಾ ಮಂದಿರ, ಮನೆ ಕಳವು

ಕಾಸರಗೋಡು: ಕಾಸರಗೋಡು ತಾಲೂಕಿನಲ್ಲಿ ಕಳ್ಳರ ಹಾವಳಿ ಮತ್ತೆ ತಲೆಯೆತ್ತಿದೆ. ಕುತ್ತಿಕ್ಕೋಲ್‌ನಲ್ಲಿ  ಭಜನಾ ಮಂದಿರ ಮತ್ತು ಮನೆಯೊಂದರಲ್ಲಿ ಕಳವು ನಡೆದಿದೆ.

ಕುತ್ತಿಕ್ಕೋಲ್ ಪ್ಲಾವಿಲದ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಕಳ್ಳರು ನುಗ್ಗಿ ಅಲ್ಲಿನ ಕಾಣಿಕೆ ಡಬ್ಬಿ ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ. ಮಾತ್ರವಲ್ಲ ಅಲ್ಲೇ ಪಕ್ಕದ ಪುಳುವುಂಜಿ ನಿವಾಸಿ ವಿದೇಶದಲ್ಲಿರುವ ಪಿ. ದಿವಾಕರನ್ ಎಂಬವರ ತೆಕ್ಕಿಲ್ ಆಲಟ್ಟಿ ರಸ್ತೆ ಬಳಿಯ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಮುರಿದು ಅದರಲ್ಲಿದ್ದ ೩೦೦೦ ರೂ. ನಗದು ಮತ್ತು ಒಂದು ಪವನ್ ಚಿನ್ನದೊಡವೆ ಕಳವುಗೈದಿದ್ದಾರೆ. ಮನೆ ಸಾಮಾಗ್ರಿಗಳನ್ನೆಲ್ಲ್ಲ ಕಳ್ಳರು ಎಳೆದು ಹಾಕಿ ಚೆಲ್ಲಾಪಿಲ್ಲಿಗಳಿಸಿದ್ದಾರೆ.ವಿಷಯ ತಿಳಿದ ಬೇಡಗಂ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದರು. ಬೆರಳಚ್ಚು ತಜ್ಞರು ಆಗಮಿಸಿ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.  ಕುತ್ತಿಕ್ಕೋಲ್ ಪರಿಸರದಲ್ಲಿ ಕಳೆದ ಎರಡು ತಿಂಗಳಲ್ಲಿ ನಡೆದ ನಾಲ್ಕನೇ ಕಳವು ಇದಾಗಿದೆ.

Leave a Reply

Your email address will not be published. Required fields are marked *

You cannot copy content of this page