ಮದ್ಯದಂಗಡಿಯಲ್ಲಿ ಕಳವು ಯತ್ನ : ಓರ್ವ ಸೆರೆ

ಕಾಸರಗೋಡು: ನಗರದ ಐ.ಸಿ. ಭಂಡಾರಿ ರಸ್ತೆ ಬಳಿ ಕಾರ್ಯ ವೆಸಗುತ್ತಿರುವ ರಾಜ್ಯ ಬಿವರೇಜ್ ಕಾರ್ಪರೇಷನ್‌ನ  ಮದ್ಯದಂಗಡಿಯಲ್ಲಿ ಕಳವಿಗೆ ಯತ್ನಿಸಿದ ಪ್ರಕರಣದ ಆರೋಪಿಗಳಲ್ಲೋರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ತಳಂಗರೆ  ನಿವಾಸಿ ಉಮೈರ್(೨೧)  ಎಂಬಾತ ಬಂಧಿತ ಆರೋಪಿ. ಈ ಪ್ರಕರಣದಲ್ಲಿ  ಇತರ ಇಬ್ಬರು ಆರೋಪಿಗಳಿದ್ದು, ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಮಾರ್ಚ್ ೬ರಂದು ರಾತ್ರಿ ಮದ್ಯದಂಗಡಿಯಲ್ಲಿ ಕಳವಿಗೆ ಯತ್ನ ನಡೆದಿತ್ತು. ಮುಖಕ್ಕೆ ಬಟ್ಟೆ ಮುಚ್ಚಿ ಬಂದ ಕಳ್ಳರು ಮದ್ಯದಂಗಡಿಯ ಬೀಗ ಮುರಿಯುತ್ತಿರುವ ದೃಶ್ಯ ಆ ಪರಿಸರದ ಸಿಸಿ ಟಿವಿ ಕ್ಯಾಮರಾದಲ್ಲಿ ಗೋಚರಿಸಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page