ಮದ್ಯದಮಲಿನಲ್ಲಿ ಚಾಲಕ ಗೂಗಲ್ ಮ್ಯಾಪ್ ನೋಡುತ್ತಾ ಚಲಾಯಿಸಿದ ಲಾರಿ ಅಂಗಡಿಗೆ ಡಿಕ್ಕಿ
ಕುಂಬಳೆ: ಚಾಲಕ ಮದ್ಯದ ಅಮಲಿನಲ್ಲಿ ಗೂಗಲ್ ಮ್ಯಾಪ್ ನೋಡುತ್ತಾ ಚಲಾಯಿಸಿದ ಲಾರಿ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ. ಘಟನೆ ವೇಳೆ ಸ್ಥಳದಲ್ಲಿ ಯಾರೂ ಇಲ್ಲದುದರಿಂದ ಭಾರೀ ಅಪಾಯ ತಪ್ಪಿದೆ. ನಿನ್ನೆ ರಾತ್ರಿ 7.30 ಗಂಟೆ ವೇಳೆ ಕುಂಬಳೆ ಪೊಲೀಸ್ ಠಾಣೆ ಸಮೀಪದ ಮಹಾಮಾಯ ಏಜೆನ್ಸೀಸ್ ಎಂಬ ಸಂಸ್ಥೆಗೆ ಲಾರಿ ಢಿಕ್ಕಿ ಹೊಡೆದಿದೆ. ಸೀತಾಂಗೋಳಿಯಿಂದ ಮಂಗಳೂರಿಗೆ ಸರಕು ಸಾಗಿಸುವ ಲಾರಿ ಇದಾಗಿದೆ. ಅಪಘಾತಕ್ಕೆ ಸಂಬಂಧಿಸಿ ಲಾರಿ ಚಾಲಕ ತಲಶ್ಶೇರಿ ನೆಟ್ಟೂರು ವಡಕ್ಕುಂಬಾಟ್ ಮಿನ್ನಲ್ಪರಂಬ್ನ ಪಿ.ವಿ. ರಿನಿಲ್ (36) ಎಂಬಾತನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕುಂಬಳೆ ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದಲ್ಲಿ ದಾಖಲಿಸಿಕೊಂಡ ಮೊದಲ ಪ್ರಕರಣ ಇದಾಗಿದೆ. ಮದ್ಯದ ಅಮಲಿನಲ್ಲಿ ಲಾರಿ ಚಲಾಯಿಸಿದ ರಿನಿಲ್ಗೆ ಲೈಸನ್ಸ್ ಇಲ್ಲವೆಂದೂ ಪೊಲೀಸರು ತಿಳಿಸಿದ್ದಾರೆ.