ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಠಾಣೆಯಲ್ಲಿ ಹಾಜರು
ಮಂಜೇಶ್ವರ: ಪೊಲೀಸರನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾದ ಆರೋಪಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ದ್ದಾನೆ. ಈ ವೇಳೆ ಆತನನ್ನು ಪೊಲೀಸ ರು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
ಕಣ್ವತೀರ್ಥ ನಿವಾಸಿ ಭವಿಷ್ (೩೯) ಎಂಬಾತ ಬಂಧಿತ ಆರೋಪಿ ಯಾಗಿದ್ದಾನೆ. ಈ ತಿಂಗಳ ೧೫ರಂದು ಸಂಜೆ ೬ ಗಂಟೆಗೆ ಭವಿಷ್ ಸ್ಕೂಟರ್ ನಲ್ಲಿ ಕಣ್ವತೀರ್ಥ ಗೇಟ್ ಬಳಿಯಿಂದ ಬೀಚ್ ಭಾಗಕ್ಕೆ ತೆರಳುತ್ತಿದ್ದನು. ಈ ವೇಳೆ ಎದುರಿನಿಂದ ಪೊಲೀಸ್ ವಾಹನ ಬರುತ್ತಿರುವುದನ್ನು ಕಂಡ ಈತ ಸ್ಕೂಟರ್ ಉಪೇಕ್ಷಿಸಿ ಪರಾರಿಯಾ ಗಿದ್ದನು. ಪೊಲೀಸರು ಸ್ಕೂಟರ್ ತಪಾಸಣೆ ನಡೆಸಿದಾಗ ಅದರಲ್ಲಿ ೯೦ ಮಿಲ್ಲಿಯ ೩೨೦ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿತ್ತು.